ಕರಾವಳಿಜಿಲ್ಲೆರಾಜ್ಯ

ಬಂಟ್ವಾಳ: ಕೊಲೆಯಾದ ಅಬ್ದುಲ್ ರಹೀಂ ಮನೆಗೆ ಸಚಿವ ದಿನೇಶ್ ಗುಂಡೂರಾವ್ ಭೇಟಿ

ಬಂಟ್ವಾಳ: ಇತ್ತೀಚೆಗೆ ಕೊಳತ್ತಮಜಲಿನಲ್ಲಿ ಕೊಲೆಯಾದ ಅಬ್ದುಲ್ ರಹೀಂ ಮನೆಗೆ ದ.ಕ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಮೇ.31ರಂದು ಭೇಟಿ ನೀಡಿ, ಕುಟುಂಬಕ್ಕೆ ಸಾಂತ್ವನ ತಿಳಿಸಿದರು.

ಬಳಿಕ ಮಾತನಾಡಿದ ಸಚಿವ ದಿನೇಶ್ ಗುಂಡೂರಾವ್, ಅಬ್ದುಲ್ ರಹೀಂ ಅವರಿಗೆ ಯಾರ ಜೊತೆನೂ ದ್ವೇಷ ಇರಲಿಲ್ಲ. ರಹೀಂ ಅಂತ್ಯ ಕ್ರಿಯೆಗೆ ಎಲ್ಲಾ ಸಮಾಜದವರೂ ಬಂದಿದ್ದರು, ಅಪರಾಧಿಗಳಿಗೆ ಕಠಿಣ ಶಿಕ್ಷೆಯಾಗಲಿದೆ, ಈ ಕೃತ್ಯದ ಹಿಂದಿರುವ ದುಷ್ಟ ಶಕ್ತಿಗಳನ್ನೂ ಪತ್ತೆ ಹಚ್ಚಿ ಕಾನೂನು ಕ್ರಮಕೈಗೊಳ್ಳಲಾಗುವುದು. ರಾಜ್ಯ ಸರ್ಕಾರ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದೆ. ಕಾನೂನು ಕ್ರಮ ಕಟ್ಟುನಿಟ್ಟಾಗಿ ಆಗುತ್ತಿದೆ, ಕುಟುಂಬಕ್ಕೆ ನ್ಯಾಯ ಕೊಡಿಸ್ತೇವೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಮಾಜಿ ಸಚಿವ ರಮಾನಾಥ ರೈ, ಎಂಎಲ್ ಸಿ ಐವನ್ ಡಿಸೋಜಾ ಮತ್ತಿತರ ಅನೇಕರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!