ಎಸ್.ಎಸ್.ಎಲ್ ಸಿ ಫಲಿತಾಂಶ: ಪುತ್ತೂರು ಸುದಾನ ಅಂಗ್ಲ ಮಾಧ್ಯಮ ಶಾಲೆಯ ಆಯಿಷ ರಹಿಮಾನ್ ಗೆ 613 ಅಂಕ
ಪುತ್ತೂರು: ಪುತ್ತೂರು ಸುಧಾನ ಅಂಗ್ಲ ಮಾಧ್ಯಮ ಶಾಲೆಯ ಅಯೀಷ ರಹಿಮಾನ್ ರವರು 613 ಅಂಕದೊಂದಿಗೆ ಉನ್ನತ ಶ್ರೇಣಿಯಲ್ಲಿ
ಉತ್ತೀರ್ಣರಾದರು.

ಇವರು ಪಾಟ್ರಕೋಡಿಯ ಮಹಮ್ಮದ್ ಅಬ್ದುಲ್ ರಹಿಮಾನ್ ಬಾಯಭೆ ಹಾಗು ರಝೀಯ ಸುಲ್ತಾನ್ ದಂಪತಿಗಳ ಸುಪುತ್ರಿ,
ಇವರ ಸಹೋದರಿ ಫಾತಿಮ್ಮ ರಹಿಮಾನ್ ರವರು ಈ ವರ್ಷ ನಡೆದ ಪಿ.ಯು ಸಿ ಪಬ್ಲಿಕ್ ಪರೀಕ್ಷೆಯಲ್ಲಿ 585 ಅಂಕಗಳನ್ನು ಪಡೆದು ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದರು.
ಈ ಇಬ್ಬರು ಸಹೋದರಿಯರು ಕೆದಿಲ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರು, ಹಾಗೂ ಮಾಜಿ ತಾಲ್ಲೂಕು ಪಂಚಾಯತ್ ಸದಸ್ಯರಾಗಿದ ಆದಂ ಕುಂಞಿ ಹಾಜಿರವರ ಮೊಮ್ಮಕ್ಕಳು.





