ಐತ್ತೂರು: ಬೈಕ್ ಸ್ಕೂಟಿ ಡಿಕ್ಕಿ, ಗ್ರಾ.ಪಂ ಸದಸ್ಯ ಮನಮೋಹನ್ ಗೋಳ್ಯಾಡಿ ಸಹಿತ ಮೂವರಿಗೆ ಗಾಯ
ಕಡಬ: ಉಪ್ಪಿನಂಗಡಿ-ಸುಬ್ರಹ್ಮಣ್ಯ ರಸ್ತೆಯ ಐತ್ತೂರು ಗ್ರಾಮದ ಕಲ್ಲಾಜೆ ಬಳಿ ಬೈಕ್ -ಸ್ಕೂಟಿ ಡಿಕ್ಕಿ ಹೊಡೆದು ಐತ್ತೂರು ಗ್ರಾ, ಪಂ. ಸದಸ್ಯ ಮನಮೋಹನ್ ಗೋಳ್ಯಾಡಿ ಸಹಿತ ಮೂವರು ಗಂಭೀರ ಗಾಯಗೊಂಡ ಘಟನೆ ಫೆ.25ರಂದು ನಡೆದಿದೆ.

ಐತ್ತೂರು ಗ್ರಾ.ಪಂ. ಸದಸ್ಯರಾಗಿರುವ ಮನಮೋಹನ ಗೋಳ್ಯಾಡಿಯವರು ಮರ್ದಾಳ ಕಡೆಯಿಂದ ತನ್ನ ಮನೆಯತ್ತ ತೆರಳುತ್ತಿದ್ದ ವೇಳೆ ಕಲ್ಲಾಜೆ ಎಂಬಲ್ಲಿ ಸುಬ್ರಹ್ಮಣ್ಯ ಕಡೆಯಿಂದ ಸುಳ್ಯ ತಾಲೂಕಿನ ಕಲ್ಲುಗುಂಡಿಯ ಯುವಕ-ಯುವತಿ ಬರುತ್ತಿದ್ದ ಸ್ಕೂಟಿ ಬೈಕ್ ಗೆ ಡಿಕ್ಕಿ ಹೊಡೆದಿತ್ತು.

ಘಟನೆಯಲ್ಲಿ ಮನಮೋಹನ್ ಗೋಳ್ಯಾಡಿಯವರಿಗೆ ಮುಖ ಹಾಗೂ ಕಾಲಿಗೆ ಗಂಭೀರ ಗಾಯವಾಗಿದ್ದು ಅವರನ್ನು ಮಂಗಳೂರಿನ ಎ.ಜೆ. ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಕೂಟಿಯಲ್ಲಿದ್ದ ಯುವಕ ಹಾಗೂ ಯುವತಿಯನ್ನು ವೆನ್‌ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದೆ.