ಗರಿಷ್ಠ ರನ್, ಗರಿಷ್ಠ ಕ್ಯಾಚ್: ದಾಖಲೆ ಬರೆದ ಕಿಂಗ್ ಕೊಹ್ಲಿ
ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಮೂಲಕ ಶತಕ ಸಿಡಿಸಿ ಫಾರ್ಮ್ ಗೆ ಮರಳಿರುವ ವಿರಾಟ್ ಕೊಹ್ಲಿ ಹಲವು ದಾಖಲೆಗಳನ್ನು ಮಾಡಿದ್ದಾರೆ.

ಕೊಹ್ಲಿ ಕೇವಲ ಬ್ಯಾಟಿಂಗ್ ಮಾತ್ರವಲ್ಲ.. ಫೀಲ್ಡಿಂಗ್ ನಲ್ಲೂ ದಾಖಲೆ ನಿರ್ಮಿಸಿದ್ದಾರೆ. ನಿನ್ನೆ ಪಾಕಿಸ್ತಾನದ ಕುಶ್ದಿಲ್ ಶಾ ಮತ್ತು ನಸೀಮ್ ಶಾ ಅವರ ಕ್ಯಾಚ್ ಗಳನ್ನು ಪಡೆದರು. ಆ ಮೂಲಕ ಕೊಹ್ಲಿ ತಮ್ಮ ಕ್ಯಾಚ್ ಗಳ ಸಂಖ್ಯೆಯನ್ನು 158ಕ್ಕೆ ಏರಿಕೆ ಮಾಡಿಕೊಂಡರು. ಈ ಮೂಲಕ ಭಾರತದ ಮೊಹಮ್ಮದ್ ಅಜರುದ್ದೀನ್ (156) ದಾಖಲೆಯನ್ನು ಕೊಹ್ಲಿ ಹಿಂದಿಕ್ಕಿದರು. ಅಲ್ಲದೆ ಶ್ರೀಲಂಕಾದ ಮಹೇಲ ಜಯವರ್ಧನೆ (218) ಮತ್ತು ರಿಕಿ ಪಾಟಿಂಗ್ (160) ಕ್ರಮವಾಗಿ ಮೊದಲೆರಡು ಸ್ಥಾನದಲ್ಲಿದ್ದಾರೆ.
ವೇಗದ 14 ಸಾವಿರ ರನ್: ಇದೇ ಪಂದ್ಯದಲ್ಲಿ ಕೊಹ್ಲಿ ಕೇವಲ 15 ರನ್ ಗಳಿಸಿದ್ದಾಗ ತಮ್ಮ ಏಕದಿನ ರನ್ ಗಳಿಕೆಯನ್ನು 14 ಸಾವಿರಕ್ಕೆ ಏರಿಕೆ ಮಾಡಿಕೊಂಡರು. ಆ ಮೂಲಕ ವೇಗವಾಗಿ 14 ಸಾವಿರ ರನ್ ಗಳಿಸಿದ ಆಟಗಾರ ಎಂಬ ಕೀರ್ತಿಗೂ ಕೊಹ್ಲಿ ಭಾಜನರಾದರು. ಕೊಹ್ಲಿ ಕೇವಲ 287 ಇನಿಂಗ್ಸ್ಗಳ ಮೂಲಕ ಈ ದಾಖಲೆ ನಿರ್ಮಿಸಿದ್ದಾರೆ.