ಕರಾವಳಿ

ತಿಂಗಳಾಡಿ: ವಿನೂತನ ಬರಹದ ಬ್ಯಾನರ್ ಪ್ರತ್ಯಕ್ಷ

ಪುತ್ತೂರು: ರಸ್ತೆ ಹದಗೆಟ್ಟು ಹೋದರೂ ಜನಪ್ರತಿನಿಧಿಗಳು ಸ್ಪಂದಿಸುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿ ವಿನೂತನ ಬ್ಯಾನರ್ ತಿಂಗಳಾಡಿಯಲ್ಲಿ ಪ್ರತ್ಯಕ್ಷಗೊಂಡಿದೆ.
ತಿಂಗಳಾಡಿ-ಬೊಳೋಡಿ ರಸ್ತೆಯ ಬದಿಯಲ್ಲಿ ಈ ಬ್ಯಾನರ್ ಪ್ರತ್ಯಕ್ಷಗೊಂಡಿದೆ.

ಬ್ಯಾನರ್ ನಲ್ಲಿ “ಸರಕಾರದ ಗಮನಕ್ಕೆ…ನಮ್ಮ ತಿಂಗಳಾಡಿ ದರ್ಬೆಯಿಂದ ಬೋಳೋಡಿ ವರಿಗಿನ ರಸ್ತೆ ಅನೇಕ ವರ್ಷಗಳಿಂದ ಗುಂಡಿಗಳಾಗಿದೆ, ಯಾವ ಸರ್ಕಾರ ಬಂದರೂ ನೀವು ಸರಿ ಮಾಡುವುದು ಇಲ್ಲಿಯವರೆಗೂ ಕಾಣಲಿಲ್ಲ ಈ ರಸ್ತೆಯಲ್ಲಿ ವಾಹನ ಬಿಟ್ಟು ಮನುಷ್ಯರಿಗೆ ಹೋಗಲು ತುಂಬಾ ಕಷ್ಟ ಆಗಿದೆ, ಅದಕ್ಕೆ ಈ ವರ್ಷದಿಂದ ಬಾಳೆ ಗಿಡ ಮತ್ತು ಅಡಿಕೆ ಗಿಡ ನೆಡುವ ಕಾರ್ಯಕ್ರಮ ಇಟ್ಟಿದ್ದೇವೆ. ಇದಕ್ಕೆ ನಮ್ಮ ಪಂಚಾಯತಿ ಸದಸ್ಯರು ಎಲ್ಲರೂ ಬಂದು ಉದ್ಘಾಟನೆ ಮಾಡಬೇಕೆಂದು ವಿನಂತಿ!! ಇಂತಿ ನಿಮ್ಮ ಮತಾಬಾಂಧವರು” ಎಂದು ಬರೆಯಾಗಿದೆ.

Leave a Reply

Your email address will not be published. Required fields are marked *

error: Content is protected !!