ಪುತ್ತೂರು ಶಿಕ್ಷಣ ಸಂಪನ್ಮೂಲ ಕೇಂದ್ರದಿಂದ ಹಾರಾಡಿ ಶಾಲೆಯಲ್ಲಿ ಪೋಕ್ಸೋ ಮಾಹಿತಿ ಕಾರ್ಯಕ್ರಮ
ಪುತ್ತೂರು: ಪೋಕ್ಸೋ ಮತ್ತು ಹೆಣ್ಣು ಮಕ್ಕಳಿಗೆ ಹದಿಹರೆಯದ ಬಗ್ಗೆ ಅಗತ್ಯ ಮಾಹಿತಿ ಕಾರ್ಯಕ್ರಮ ಸೆ.21 ರಂದು ಹಾರಾಡಿ ಸರಕಾರಿ ಹಿರಿಯ ಉನ್ನತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು.
ಸಂಪನ್ಮೂಲ ವ್ಯಕ್ತಿಯಾಗಿ ಬಾಲ ನ್ಯಾಯ ಮಂಡಳಿಯ ಶ್ರೀಮತಿ ಕಸ್ತೂರಿ ಬೊಳುವಾರುರವರು ಪೋಕ್ಸೋ ಮತ್ತು ಹದಿಹರೆಯದ ಬಗ್ಗೆ ಸಮರ್ಪಕ ಮಾಹಿತಿಯನ್ನು ವಿದ್ಯಾರ್ಥಿನಿಯರಿಗೆ ನೀಡಿದರು.
ಕಾರ್ಯಕ್ರಮದಲ್ಲಿ ಸಂಪನ್ಮೂಲ ಕೇಂದ್ರದ ಕಾರ್ಯದರ್ಶಿ ಸುಮಂಗಲ ಶೆಣೈಯವರು ಮೊಬೈಲ್ ಬಳಕೆಯ ದುಷ್ಪರಿಣಾಮದ ಬಗ್ಗೆ ಮಾತನಾಡಿ ವಿದ್ಯಾರ್ಥಿಗಳಲ್ಲಿ ದಿನದ ದಿನಚರಿಯಲ್ಲಿ ಅಳವಡಿಸಿಕೊಳ್ಳಬೇಕಾದ ವಿಚಾಗಳ ಬಗ್ಗೆ ತಿಳಿಸಿದರು.
ಶಾಲಾ ಮುಖ್ಯೋಪಾದ್ಯಾಯರಾದ ಶ್ರೀ ಹುಕ್ಕರವರು ಮಾತನಾಡಿ ಶಾಲೆಯಲ್ಲಿ ಕಲಿಕೆಗಾಗಿ ಅಧ್ಯಾಪಕರು ಮುತುವರ್ಜಿ ವಹಿಸಿದರ ಮದ್ಯೆ ಅಗತ್ಯ ಮಾಹಿತಿಗಳು ವಿದ್ಯಾರ್ಥಿಗಳಿಗೆ ಶಿಕ್ಷಣ ಸಂಪನ್ಮೂಲದಿಂದ ದೊರೆಯುವುದರಿಂದ ವಿದ್ಯಾರ್ಥಿಗಳಲ್ಲಿ ತಿಳುವಳಿಕೆಯ ಕೊರತೆ ನೀಗುತ್ತದೆ, ಈ ನಿಟ್ಟಿನಲ್ಲಿ ಶಿಕ್ಷಣ ಸಂಪನ್ಮೂಲ ಕೇಂದ್ರದ ಸಹಕಾರ ಅತ್ಯಗತ್ಯ ಎಂದು ವಿವರಿಸಿದರು ಕಾಯಕ್ರಮದಲ್ಲಿ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರಾದ ಸುಲೋಚನಾ, ಶಿಕ್ಷಣ ಸಂಪನ್ಮೂಲ ಕೇಂದ್ರದ ಕಾ.ಸಮಿತಿ ಸದಸ್ಯೆ ಪ್ರೇಮಲತಾ ನಂದಿಲ, ಶಾಲಾ ಅಧ್ಯಾಪಕಿಯರು ಭಾಗವಹಿಸಿದ್ದರು.