ಕರಾವಳಿ

ಉಪ್ಪಿನಂಗಡಿ: ಜ್ಞಾನ ಭಾರತಿ ಶಾಲೆಯಲ್ಲಿ 17ನೇ ಶಾಲಾ ವಾರ್ಷಿಕೋತ್ಸವ ಸಂಭ್ರಮ

ಉಪ್ಪಿನಂಗಡಿ: ಇಲ್ಲಿನ ಜ್ಞಾನ ಭಾರತಿ ಶಾಲೆಯ 17ನೇ ವರ್ಷದ ಶಾಲಾ ವಾರ್ಷಿಕೋತ್ಸವದ ಸಂಭ್ರಮಾಚರಣೆ ಸಂಸ್ಥೆಯ ಟ್ರಸ್ಟಿ ಸುಲೈಮಾನ್ ಬಿ.ಕೆ ಇವರ ಅಧ್ಯಕ್ಷತೆಯಲ್ಲಿ ನಡೆಯಿತು.

ದ್ವಜಾರೋಹಣ ಹಾಗೂ ನೂತನವಾಗಿ ನಿರ್ಮಿಸಿದ ಶಾಲಾ ಪ್ರವೇಶ ದ್ವಾರದ ಉದ್ಘಾಟನೆಯನ್ನು ಸಂಸ್ಥೆಯ ಉಪಾಧ್ಯಕ್ಷರಾದ, ಈ ವರ್ಷದ ಬ್ಯಾರಿ ಪ್ರಶಸ್ತಿ ವಿಜೇತ ಹಿರಿಯರಾದ ಹುಸೈನ್ ಬಡಿಲ ಇವರು ನೆರವೇರಿಸಿದರು.

ಸಂಜೆ ನಡೆದ ವಾರ್ಷಿಕೋತ್ಸವ ಸಮಾರಂಭದ
ಸಭಾ ಕಾರ್ಯಕ್ರಮವನ್ನು ರೋಟರಿ ಉಪ್ಪಿನಂಗಡಿಯ ಅಸಿಸ್ಟೆಂಟ್ ಗವರ್ನರ್, ಖ್ಯಾತ ದಂತ ವೈದ್ಯ ಕೆ.ಬಿ. ರಾಜಾರಾಮ್ ಇವರು ಉದ್ಘಾಟಿಸಿ ಶಿಕ್ಷಣ ಎಂಬುವುದು ಸಾರ್ವಕಾಲಿಕ ಶ್ರೇಷ್ಠ ಮಟ್ಟದ ಸಂಪತ್ತು
ಎಂದು ತಿಳಿಸಿದರು.

ಸಂಸ್ಥೆಯ ಕಾನೂನು ಸಲಹೆಗಾರರಾಗಿರುವ ಅಡ್ವೊಕೇಟ್ ಅಶ್ರಫ್ ಅಗ್ನಾಡಿ ಇವರು ಮಾತನಾಡುತ್ತಾ ಸಂಸ್ಥೆಯ ಸುಧೀರ್ಘ ಹದಿನೇಳು ವರ್ಷಗಳ ಮಹತ್ವಪೂರ್ಣ
ಶೈಕ್ಷಣಿಕ ಸಾಧನೆಯನ್ನು ಶ್ಲಾಘಿಸಿದರು.

ಕಾರ್ಯಕ್ರಮ ದಲ್ಲಿ ಶಾಲಾ ಸಂಚಾಲಕ ರವೂಫ್ ಯು. ಟಿ ಇವರ ತಂದೆ ಹಾಗೂ ತಾಯಿಯ ಸ್ಮರಣಾರ್ಥ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಮಹತ್ವಪೂರ್ಣ ಸಾಧನೆ ಮಾಡಿದ ಮಹನೀಯರಿಗೆ ಕೊಡಮಾಡುವ ಜ್ಞಾನ ರತ್ನ ಪ್ರಶಸ್ತಿಯನ್ನು ಈ ವರ್ಷದ ಬ್ಯಾರಿ ಅವಾರ್ಡ್ ಪುರಸ್ಕಾರ ಪಡೆದ ಸಂಸ್ಥೆಯ ಉಪಾಧ್ಯಕ್ಷರಾದ ಹುಸೈನ್ ಬಡಿಲ ಇವರಿಗೆ ನೀಡಿ ಗೌರವಿಸಲಾಯಿತು.
ಸಂಸ್ಥೆಯಲ್ಲಿ ಸುದೀರ್ಘ ಹತ್ತು ವರ್ಷಗಳ ಕಾಲ ಸೇವೆಯನ್ನು ಸಲ್ಲಿಸಿದ ಶ್ರೀಮತಿ ತನ್ಶೀರ ಇವರಿಗೂ ಇದೇ ಸಂದರ್ಭದಲ್ಲಿ “ಜ್ಞಾನ ಶ್ರೀ” ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
ಕಳೆದ ಶೈಕ್ಷಣಿಕ ಸಾಲಿನಲ್ಲಿ ಎಸ್.ಎಸ್. ಎಲ್. ಸಿ. ಪಬ್ಲಿಕ್ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕಗಳನ್ನು ಗಳಿಸಿ ಸಂಸ್ಥೆ ಗೆ ಕೀರ್ತಿಯನ್ನು ತಂದುಕೊಟ್ಟ ತಸ್ಕೀನ್ ಇವರಿಗೆ ಜ್ಞಾನ ಅವಾರ್ಡ್ ನ್ನು ಸಂಸ್ಥೆಯ ಕಾನೂನು ಸಲಹೆಗಾರ ರಾಗಿರುವ ಅಶ್ರಫ್ ಅಗ್ನಾಡಿ ಇವರು ನೀಡಿ ಗೌರವಿಸಿದರು.

ವಿದ್ಯಾ ಸಂಸ್ಥೆಯ ಏಳನೇ ತರಗತಿಯ ಹಬೀಬುಲ್ಲಾ, ಎಂಟನೇ ತರಗತಿಯ ಫಾತಿಮಾ ಶನುಮ್ ಮತ್ತು ಆರನೇ ತರಗತಿಯ ಫಾತಿಮಾ ಸಲ್ವಾ ಇವರ ವಿಶೇಷ ಸಾಧನೆಗಳನ್ನು ಗುರುತಿಸಿ ಅವರಿಗೆ “ಜ್ಞಾನ ಅವಾರ್ಡ್” ನೀಡಿ ಗೌರವಿಸಲಾಯಿತು.

ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಇಕ್ಬಾಲ್ ಜೋಗಿಬೆಟ್ಟು ವಿದ್ಯಾರ್ಥಿಗಳಿಗೆ ಶಿಕ್ಷಣದ ಮಹತ್ವದ ಬಗ್ಗೆ ಮಾಹಿತಿ ನೀಡಿದರು. ವೇದಿಕೆಯಲ್ಲಿ ಉಪ್ಪಿನಂಗಡಿ ಮಾಲಿಕ್ ದೀನಾರ್ ಕೇಂದ್ರ ಜುಮ್ಮಾ ಮಸೀದಿಯ ಅಧ್ಯಕ್ಷರಾಗಿರುವ ಯೂಸುಫ್ ಹಾಜಿ ಹೇಂತಾರ್ ಉಪಸ್ಥಿತರಿದ್ದರು. ಎಲ್. ಕೆ.ಜಿ ಯಿಂದ ಹತ್ತನೆಯ ತರಗತಿಯ ವರೆಗಿನ ಸಂಸ್ಥೆಯಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಮನರಂಜನಾ ಕಾರ್ಯಕ್ರಮಗಳು ಹಾಗೂ ವಿದ್ಯಾರ್ಥಿಗಳು ಮತ್ತು ನಾಗರಿಕರಲ್ಲಿ ಜಾಗೃತಿಯನ್ನು ಮೂಡಿಸುವ ಸಲುವಾಗಿ ನಾಟ್ ಟು ಡ್ರಗ್ಸ್ ಮತ್ತು ನಾಟ್ ಟು ಮೊಬೈಲ್ ಎಂಬ ವಿಶೇಷ ಕಾರ್ಯಕ್ರಮ ಗಳು ನಡೆಯಿತು.

ಶಾಲಾ ಪ್ರಾಂಶುಪಾಲರಾದ ಇಬ್ರಾಹಿಂ ಖಲೀಲ್ ಹೇಂತಾರ್ ವಂದಿಸಿದರು. ಮುಖ್ಯ ಶಿಕ್ಷಕಿಯ ತಾಹಿರಾ ಹಾಗೂ ಅರುಣಾ ಕಾರ್ಯಕ್ರಮ ಸಂಯೋಜನೆ ಮಾಡಿದರು.

Leave a Reply

Your email address will not be published. Required fields are marked *

error: Content is protected !!