ಮುಂಡೂರು ಸಿ.ಎ ಬ್ಯಾಂಕ್ ನಿರ್ದೇಶಕ ಸ್ಥಾನಕ್ಕೆ 12 ಮಂದಿ ಕಾಂಗ್ರೆಸ್ ಬೆಂಬಲಿತರು ಅವಿರೋಧ ಆಯ್ಕೆ
ಪುತ್ತೂರು: ಮುಂಡೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಆಡಳಿತ ಮಂಡಳಿಗೆ 12 ಮಂದಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ.

ಡಿ.29ರಂದು ಸಂಘದ ನಿರ್ದೇಶಕರ ಆಯ್ಕೆಗೆ ಚುನಾವಣೆ ನಡೆಯಬೇಕಾಗಿದ್ದು ಡಿ.23ರಂದು ನಾಮ ಪತ್ರ ಹಿಂಪಡೆಯಲು ಕೊನೆಯ ದಿನವಾಗಿತ್ತು. ಸಹಕಾರ ಭಾರತಿ ಬೆಂಬಲಿತ ಅಭ್ಯರ್ಥಿಗಳೆಲ್ಲರೂ ನಾಮಪತ್ರ ವಾಪಸ್ ಪಡೆದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳಾದ ಹಾಲಿ ಅಧ್ಯಕ್ಷ ಸುರೇಶ್ ಕುಮಾರ್ ಸೊರಕೆ, ಉಪಾಧ್ಯಕ್ಷ ಯಾಕೂಬ್ ಮುಲಾರ್, ಹಾಲಿ ನಿರ್ದೇಶಕರಾಗಿದ್ದ ಎಸ್ ಡಿ ವಸಂತ, ಶಿವನಾಥ ರೈ ಮೇಗಿನಗುತ್ತು, ಸುಧೀರ್ ಕೃಷ್ಣ ಎಂ.ಪಿ, ಪದ್ಮಯ್ಯ ಬಂಡಿಕಾನ, ವಸಂತ ಬಿ ಎನ್, ಆನಂದ ಪೂಜಾರಿ, ಕೊರಗಪ್ಪ ಸೊರಕೆ, ಶರಣ್ ರೈ, ಗುಲಾಬಿ ಎನ್ ಶೆಟ್ಟಿ ಹಾಗೂ ನೂತನ ನಿರ್ದೇಶಕರಾಗಿ ನಯನಾ ಗಣೇಶ್ ಅವಿರೋಧವಾಗಿ ಆಯ್ಕೆಯಾದರು.
ಚುನಾವಣಾಧಿಕಾರಿ ಶೋಭಾ ಎನ್.ಎಸ್ ಅವಿರೋಧ ಆಯ್ಕೆ ಬಗ್ಗೆ ಘೋಷಿಸಿದರು. ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಯಪ್ರಕಾಶ್ ರೈ ಮತ್ತು ಸಿಬ್ಬಂದಿಗಳು ಸಹಕರಿಸಿದರು.