ಅಜ್ಜಾವರ ಮೇನಾಲ ದರ್ಗಾ ದಲ್ಲಿ ಮಾಸಿಕ ಸ್ವಲಾತ್ ಮಜ್ಲೀಸ್: ಉರೂಸ್ ಸಮಾರಂಭದ ಯಶಸ್ವಿಗೆ ವಿಶೇಷ ಪ್ರಾರ್ಥನೆ
ಸುಳ್ಯ: ಇತಿಹಾಸ ಪ್ರಸಿದ್ಧ ಅಜ್ಜಾವರ ಮೇನಾಲ ದರ್ಗಾದಲ್ಲಿ ವರ್ಷಂಪ್ರತಿ ಆಚರಿಸಿಕೊಂಡು ಬರುವ ಉರೂಸ್ ಕಾರ್ಯಕ್ರಮ ಜನವರಿ 17 ರಿಂದ 21ರ ವರೆಗೆ ನಡೆಯಲಿದೆ.
ಈ ಕಾರ್ಯಕ್ರಮದ ಯಶಸ್ವಿಗೆ ಡಿ.8ರಂದು ಮೇನಾಲ ದರ್ಗಾದಲ್ಲಿ ನಡೆದ ಮಾಸಿಕ ಸ್ವಲಾತ್ ಮಜ್ಲೀಸ್ ನಲ್ಲಿ ವಿಶೇಷ ಪ್ರಾರ್ಥನೆ ನಡೆಯಿತು.
ಸ್ಥಳೀಯ ಮಸೀದಿ ಖತೀಬರಾದ ಹಸೈನಾರ್ ಫೈಝಿರವರು ದುವಾ ನೇತೃತ್ವವನ್ನು ವಹಿಸಿದ್ದರು.
ಈ ಸಂದರ್ಭದಲ್ಲಿ ಹಿರಿಯರಾದ ಅಬ್ಬಾಸ್ ಹಾಜಿ ಡೆಲ್ಮ, ಆಡಳಿತ ಕಮಿಟಿಯ ಪ್ರಧಾನ ಕಾರ್ಯದರ್ಶಿ ಅಬೂಬಕ್ಕರ್, ಕೋಶಾಧಿಕಾರಿ ಶರೀಫ್ ರಿಲ್ಯಾಕ್ಸ್, ಸದಸ್ಯರುಗಳಾದ ಖಾದರ್ ಎನ್, ಸಿದ್ದೀಕ್ ಡೆಲ್ಮ,ರಹ್ಮಾನ್, ಹನೀಫ್ ಮುಸ್ಲಿಯಾರ್ ಹಾಗೂ ಜಮಾಅತ್ ಸದಸ್ಯರುಗಳು ಮತ್ತು ಸ್ಥಳೀಯ ಜಮಾಅತ್ ಬಾಂಧವರು ಉಪಸ್ಥಿತರಿದ್ದರು.