ಸುಳ್ಯ ಅನ್ಸಾರಿಯ ಎಜುಕೇಶನ್ ಸೆಂಟರ್ ಗೆ ಜಿಫ್ರಿ ಮುತ್ತುಕೋಯ ತಂಙಳ್ ಭೇಟಿ
ಸುಳ್ಯದಲ್ಲಿ ಇತ್ತೀಚಿಗೆ ಉದ್ಘಾಟನೆಗೊಂಡ ಅನ್ಸಾರಿಯ ಗಲ್ಫ್ ಆಡಿಟೋರಿಯಂಗೆ ಸಮಸ್ತ ಕೇರಳ ಜಮೀಯತುಲ್ ಉಲಮಾ ಇದರ ಅಧ್ಯಕ್ಷರು ಹಾಗೂ ಹಿರಿಯ ವಿದ್ವಾಂಸರು ಆದ ಸಯ್ಯದುಲ್ ಉಲಮಾ ಅಸ್ಸಯ್ಯದ್ ಮುಹಮ್ಮದ್ ಜಿಫ್ರಿ ಮುತ್ತುಕೋಯ ತಂಙಳ್ ಡಿ.5ರಂದು ಭೇಟಿ ನೀಡಿ ಆಡಿಟೋರಿಯಂ ವೀಕ್ಷಣೆ ಮಾಡಿ ಪ್ರಾರ್ಥನೆ ನೆರವೇರಿಸಿದರು.
ತಂಙಳ್ ರವರನ್ನು ಅನ್ಸಾರಿಯ ಎಜುಕೇಶನ್ ಸೆಂಟರ್ ವತಿಯಿಂದ ಗೌರವ ಸ್ವಾಗತ ಕೋರಲಾಯಿತು.
ಈ ಸಂದರ್ಭದಲ್ಲಿ ಆಯೋಜಕರು ಏರ್ಪಡಿಸಿದ ಸಭಾ ಕಾರ್ಯಕ್ರಮ ಹಾಗೂ ಪ್ರಾರ್ಥನಾ ಸಂಗಮದಲ್ಲಿ ಭಾಗವಹಿಸಿದ ಅವರು ‘ಸಮುದಾಯದ ಹಿತಕ್ಕಾಗಿ ಸಂಘಟಕರು ನೀಡಿದ ಈ ಸೇವೆ ಅಲ್ಲಾಹನು ಸ್ವೀಕರಿಸಿ ಎಲ್ಲರನ್ನು ಕರುಣಿಸಲಿ ಎಂದು ಪ್ರಾರ್ಥನೆ ನಡೆಸಿ ಆಡಿಟೋರಿಯಂ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಗಾಂಧಿನಗರ ಜುಮಾ ಮಸ್ಜಿದ್ ಮುದರ್ರಿಸ್ ಇರ್ಫಾನ್ ಸಖಾಫಿ ಅಲ್ ಹಿಕಮಿ, ಕೇಂದ್ರ ಜುಮಾ ಮಸೀದಿ ಅಧ್ಯಕ್ಷ ಹಾಜಿ ಮಹಮ್ಮದ್ ಕೆ ಎಂ ಎಸ್, ಅನ್ಸಾರುಲ್ ಮುಸ್ಲಿಮಿನ್ ಅಸೋಸಿಯೇಶನ್ ಅಧ್ಯಕ್ಷ ಅಬ್ದುಲ್ಲಾ ಕಟ್ಟೆಕಾರ್, ಅನ್ಸಾರಿಯಾ ಎಜುಕೇಷನ್ ಸೆಂಟರ್ ಪ್ರಧಾನ ಕಾರ್ಯದರ್ಶಿ ಲತೀಫ್ ಹರ್ಲಡ್ಕ, ಗಲ್ಫ್ ಸಮಿತಿ ಉಪಾಧ್ಯಕ್ಷ ಮುನೀರ್ ಜಟ್ಟಿಪಳ, ಮುಖಂಡರುಗಳಾದ ಹಮೀದ್ ಹಾಜಿ, ಆದಂ ಹಾಜಿ ಕಮ್ಮಾಡಿ, ಹಮೀದ್ ಬೀಜಕೊಚ್ಚಿ, ಇಕ್ಬಾಲ್ ಎಲಿಮಲೆ, ಇಕ್ಬಾಲ್ ಸುಣ್ಣಮೂಲೆ, ಅಬ್ದುಲ್ ಖಾದರ್ ಬಯಂಬಾಡಿ, ಅಬ್ದುಲ್ ಖಾದರ್ ಪಟೇಲ್ ಅರಂತೋಡು, ಹಮೀದ್ ಎಸ್ ಎಂ, ಅಬೂಬ್ಬಕ್ಕರ್ ಪೂಪಿ, ಕಲಂದರ್ ಎಲಿಮಲೆ, ರಫೀಕ್ ಮೂಲೆ, ಅಕ್ಬರ್ ಕರಾವಳಿ, ಶಾಫಿ ದಾರಿಮಿ, ಉಮ್ಮರ್ ಕೆ ಎಸ್, ಶರೀಫ್ ಕಂಠಿ, ಶಾಫಿ ಕುತ್ತಮೊಟ್ಟೆ, ಕೆ ಬಿ ಇಬ್ರಾಹಿಂ ಮೊದಲಾದವರು ಉಪಸ್ಥಿತರಿದ್ದರು. ಹಾಜಿ ಕೆ ಎಂ ಮುಸ್ತಫಾ ಜನತಾ ಸ್ವಾಗತಿಸಿದರು. ಶರೀಫ್ ಸುದ್ದಿ ವಂದಿಸಿದರು. ಕಮಾಲ್ ಅಜ್ಜಾವರ ಕಾರ್ಯಕ್ರಮ ನಿರೂಪಿದರು.