ಸುಳ್ಯ ತಾಲೂಕು ಕಚೇರಿಯಲ್ಲಿ ಕುಸಿದುಬಿದ್ದು ವ್ಯಕ್ತಿ ಮೃತ್ಯು
ಸುಳ್ಯ: ಜಾಲ್ಸೂರು ಗ್ರಾಮದ ಅಡ್ಕಾರಿನ ರಾಘವ ಆಚಾರ್ಯ ಅವರು ಸುಳ್ಯದಲ್ಲಿ ಕುಸಿದುಬಿದ್ದು ಮೃತಪಟ್ಟ ಘಟನೆ ನ.27ರಂದು ಬೆಳಿಗ್ಗೆ ಸಂಭವಿಸಿದೆ.
ರಾಘವ ಆಚಾರ್ಯ ಅವರು ಬೆಳಿಗ್ಗೆ ತಮ್ಮ ಮನೆಯಿಂದ ಸುಳ್ಯ ತಾಲೂಕು ಕಛೇರಿಗೆ ಹೋದ ಸಂದರ್ಭದಲ್ಲಿ ತಾಲೂಕು ಕಛೇರಿಯ ಪಡಸಾಲೆಯಲ್ಲಿ ಕುಸಿದುಬಿದ್ದು ಮೃತಪಟ್ಟರೆಂದು ತಿಳಿದುಬಂದಿದೆ.
ಮೃತರು ಪತ್ನಿ ಸಾವಿತ್ರಿ, ಪುತ್ರರಾದ ಸತೀಶ್, ಶಿವಪ್ರಸಾದ್, ಪುತ್ರಿ ಶ್ರೀಮತಿ ರೇಖಾ ಸೇರಿದಂತೆ ಕುಟುಂಬಸ್ಥರನ್ನು ಅಗಲಿದ್ದಾರೆ.