ಮಂಗಳೂರು: ಮಕ್ಕಳ ಹಕ್ಕುಗಳ ಮಾಸೋತ್ಸವ-2024 ಕಾರ್ಯಕ್ರಮದ ಕುರಿತು ಪೂರ್ವಭಾವಿ ಸಭೆ
ದಕ್ಷಿಣ ಕನ್ನಡ ಜಿಲ್ಲಾ ಮಕ್ಕಳ ಹಕ್ಕುಗಳ ಮಾಸೋತ್ಸವ 2024ರ ಅನುಷ್ಠಾನದ ಕುರಿತು ಪೂರ್ವ ಸಿದ್ಧತಾ ಸಮಾಲೋಚನ ಸಭೆ ಮಂಗಳೂರು ಪಡಿ ಸಂಸ್ಥೆಯ ಸಭಾಂಗಣದಲ್ಲಿ ನಡೆಯಿತು.
ಸಭೆಯಲ್ಲಿ ಜಿಲ್ಲೆಯಲ್ಲಿ ಮಕ್ಕಳು ಎದುರಿಸುತ್ತಿರುವ ನಾನಾ ರೀತಿಯ ಸಮಸ್ಯೆಗಳನ್ನು ಪರಿಹರಿಸುವ ಬಗ್ಗೆ ಹಾಗೂ ಜನ ಸಮುದಾಯದಲ್ಲಿ ಮಕ್ಕಳ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸುವ ಹಾಗೂ ಸರಕಾರದ ವಿವಿಧ ಇಲಾಖೆಗಳ ಸಹಯೋಗದಲ್ಲಿ ಮಕ್ಕಳಿಗೆ ನ್ಯಾಯಯುತ ವ್ಯವಸ್ಥೆಯನ್ನು ಕಲ್ಪಿಸುವ ಬಗ್ಗೆ ಚರ್ಚೆಗಳು ನಡೆಯಿತು.
ಮಂಗಳೂರು ನಗರ ಕಮೀಸನರೇಟ್ ಎ ಸಿ ಪಿ ಶ್ರೀಮತಿ ಗೀತಾ ಕುಲಕರ್ಣಿಯವರು ಮಾತನಾಡಿ ‘ಭಾರತೀಯ ನ್ಯಾಯಿಕ ಸಂಹಿತೆ ಮತ್ತು C.R.P.C ಯ ಬದಲಿಗೆ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ ಜಾರಿಗೆ ಬಂದಿದ್ದು, ಇದು ಅಪರಾಧಕ್ಕೆ ಸಂಬಂಧಿಸಿದ ಕಾನುನುಗಳಾಗಿದ್ದು ಇಲ್ಲಿ ಆಗಿರುವ ತಿದ್ದು ಪಡಿಗಳನ್ನು ಸಾಮಾಜಿಕ ಕಾರ್ಯಕರ್ತರು ಕೂಡ ತಿಳಿದು ಕೊಳ್ಳಬೇಕಾಗಿದೆ. ಹಾಗೂ 18 ವರ್ಷದ
ಕೆಳಗಿನ ವಯಸ್ಸಿನವರನ್ನು ಮಕ್ಕಳು ಎಂದು ಪರಿಗಣಿಸಲಾಗಿದ್ದು, ತೃತೀಯ ಲಿಂಗಿ ಮಕ್ಕಳನ್ನ ಮಕ್ಕಳೆಂದೇ ಪರಿಗಣಿಸಬೇಕಾಗಿದೆ ಎಂದು ತಿಳಿಸಿದರು.
ಸಮಾಲೋಚನ ಸಭೆಯಲ್ಲಿ ಮಕ್ಕಳ ಹಕ್ಕುಗಳ ಮಾಸೋತ್ಸವದ ಅಡಿಯಲ್ಲಿ
ಶಾಲೆಗಳಲ್ಲಿ ಮಕ್ಕಳ ಸುರಕ್ಷಾ ಸಮಿತಿಗಳನ್ನು ರಚಿಸಲು ಜಾಗೃತಿ ಕಾರ್ಯಕ್ರಮ ನಡೆಸುವುದು, ಜನಪ್ರತಿನಿಧಿಗಳೊಂದಿಗೆ ಮಕ್ಕಳ ಹಕ್ಕುಗಳ ಕುರಿತು ಸಂವಾದ ಕಾರ್ಯಕ್ರಮ, ಪೋಲೀಸ್ ಇಲಾಖಾ ಸಹಭಾಗಿತ್ವದಲ್ಲಿ ಅಪರಾಧ ಕಾಯಿದೆಗಳಿಗೆ ಸಂಬಂಧಿದಿಸಿದ ವಿಷಯದಲ್ಲಿ ಜಾಗೃತಿ ಕಾರ್ಯಕ್ರಮ, ಮಾಧ್ಯಮ ಬಳಗದೊಂದಿಗೆ ಮಕ್ಕಳ ಹಕ್ಕುಗಳ ಕುರಿತು ಕಾರ್ಯಗಾರ ನಡೆಸುವುದು,
ಮಕ್ಕಳಲ್ಲಿ ಉಂಟಾಗುತ್ತಿರುವ ಅತಿಯಾದ ಮೊಬೈಲ್ ಬಳಕೆ ಬಗ್ಗೆ ಪೋಷಕರಿಗೆ ಅರಿವು ಮೂಡಿಸುವುದು, ಕಟ್ಟಡ ಕಾರ್ಮಿಕರ ಗಂಪುಗಳಿಗೆ ಮಕ್ಕಳ ಹಕ್ಕು ಮತ್ತು ಕಾನೂನುಗಳ ಬಗ್ಗೆ ಜಾಗ್ರತಿ ಮೂಡಿಸುವುದು, ಮಕ್ಕಳ ಹಕ್ಕು ಮತ್ತು ಪೋಕ್ಸೋ ಕಾಯಿದೆ ಬಗ್ಗೆ ಆರೋಗ್ಯ ಇಲಾಖೆ ಸಿಬ್ಬಂದಿಗಳಿಗೆ, ಸಾರ್ವಜನಿಕರಿಗೆ ಮತ್ತು ಮಕ್ಕಳಿಗೆ ಜಾಗ್ರತಿ ಮೂಡಿಸುವುದು, ವಿದ್ಯಾರ್ಥಿನಿಲಯ ಮತ್ತು ಶಾಲೆಗಳಲ್ಲಿ ಮಕ್ಕಳಿಗೆ ಕಾನೂನು ಮತ್ತು ಸಂವಿಧಾನದ ಬಗ್ಗೆ ಅರಿವು ಕಾರ್ಯಕ್ರಮ ನಡೆಸುವುದು, ಕಾನೂನಾತ್ಮಕ ದತ್ತು ಸಂಬಂಧಿಸಿದ ವಿಷಯಗಳ ಬಗ್ಗೆ ಸಾರ್ವಜನಿಕ ಅರಿವು ಮೂಡಿಸುವುದು,ಮಕ್ಕಳ ಹಕ್ಕುಗಳ ವಿಷೇಶ ಗ್ರಾಮ ಸಭೆಯನ್ನು ಪರಿಣಾಮಕಾರಿಯಾಗಿ ನಡೆಸಲು ಕ್ರಮ ಕೈ ಗೊಳ್ಳುವುದು, 2023ರ ಮಕ್ಕಳ ಹಕ್ಕುಗಳ ಮಾಸೋತ್ಸವದ ಹಕ್ಕೊತ್ತಾಯಗಳನ್ನು ಕಾರ್ಯರೂಪಕ್ಕೆ ತರಲು ಸರಕಾರ ಇಲಾಖೆ ಮತ್ತು ಜನಪ್ರತಿನಿಧಿಗಳೊಂದಿಗೆ ವಕೀಲಿ ಕ್ರಮ ನಡೆಸುವುದು ಇತ್ಯಾದಿ ಕಾರ್ಯಕ್ರಮಗಳನ್ನು ನಡೆಸಲು ತೀರ್ಮಾನ ಕೈ ಗೊಳ್ಳಲಾಯಿತು.
ಕಾರ್ಯಕ್ರಮದ ಸಮಿತಿ ರಚನೆ: ಕಾರ್ಯಕ್ರಮಗಳ ಯಶಸ್ವಿಗೆ ಸಮಿತಿ ರಚಿಸಿ ಮುಖ್ಯ ಸಂಚಾಲಕರಾಗಿ ಶ್ರೀಮತಿ ಆಶಾಲತಾ ಸುವರ್ಣ, ಸಹ ಸಂಚಾಲಕರುಗಳಾಗಿ ಮಾಧ್ಯಮ: ಹಸೈನಾರ್ ಜಯನಗರ ಸುಳ್ಯ
ಸಂಘಟಕ ವಿಭಾಗ ಶ್ರೀಮತಿ ನಂದಾ ಪಾಯಸ್, ದಾಖಲಾತಿ ಶ್ರೀಮತಿ ಸುಮಂಗಲಾ, ವಕಾಲತ್ತು: ಶ್ರೀಮತಿ ಹರಿಣಿ, ಹಾಗೂ ಹಾರೀಸ್ ಬಂಟ್ವಾಳ ಅವರನ್ನು ಆಯ್ಕೆ ಮಾಡಲಾಯಿತು.
ಸಭೆಯಲ್ಲಿ ಜಿಲ್ಲಾ ಒಕ್ಕೂಟ ಸಮಿತಿ ಅಧ್ಯಕ್ಷೆ ಶ್ರೀಮತಿ ಕಮಲಾ, ಹಾಗೂ ಸಮಿತಿಯ ಸದಸ್ಯರುಗಳು, ಜಿಲ್ಲೆಯ ವಿವಿಧ ತಾಲೂಕುಗಳ ಶಿಕ್ಷಣ ಸಂಪನ್ಮೂಲ ಕೇಂದ್ರಗಳ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು, ಎನ್ ಜಿ ಓ ಸಂಸ್ಥೆಗಳ ಸದಸ್ಯರುಗಳು ಭಾಗವಹಿಸಿದ್ದರು. ಪಡಿ ಸಂಸ್ಥೆಯ ಮುಖ್ಯಸ್ಥೆ, ತರಬೇತುದಾರರಾದ ಕಸ್ತೂರಿ ಬೊಳುವಾರು ಕಾರ್ಯಕ್ರಮ ನಿರೂಪಿಸಿದರು.