ರಾಜಸ್ತಾನದಲ್ಲಿ ಅವಿತುಕೊಂಡಿದ್ದ ಕೊಲೆ ಆರೋಪಿಯನ್ನು ಮತ್ತೆ ಬಂಧಿಸುವಲ್ಲಿ ಯಶಸ್ವಿಯಾದ ಕೊಡಗು ಪೊಲೀಸರಿಗೆ ಸನ್ಮಾನ
ಕೊಡಗು: ಪೊಲೀಸರಿಂದ ತಪ್ಪಿಸಿ ಪರಾರಿಯಾಗಿ ರಾಜಸ್ತಾನ ದಲ್ಲಿ ಅವಿತು ಕ್ಕೊಂಡಿದ್ದ ಕೊಲೆ ಆರೋಪಿಯನ್ನು ಮತ್ತೆ ಹಿಡಿದು ತಂದು ನ್ಯಾಯಾಲಯಕ್ಕೆ ಒಪ್ಪಿಸಿದ ಸುಂಟಿಕೊಪ್ಪ ಪೊಲೀಸ್ ಠಾಣಾ ಅಧಿಕಾರಿಗಳನ್ನು ಮತ್ತು ತಂಡವನ್ನು ಕೊಡಗು ಜಿಲ್ಲಾ ಎಸ್ ಡಿ ಟಿ ಯು ಸಮಿತಿಯು ನ 13ರಂದು ಸುಂಟಿಕೊಪ್ಪ ಠಾಣೆಯಲ್ಲಿ ಗೌರವಿಸಿ ಸನ್ಮಾನಿಸಿದೆ.
ವ್ಯಕ್ತಿಯೊಬ್ಬರನ್ನು ಬೇರೆ ರಾಜ್ಯದಲ್ಲಿ ಕೊಲೆ ಮಾಡಿ ಶವವನ್ನು ಕಾರಿನಲ್ಲಿ ತಂದು ಮಾದಾಪುರ ಸಮೀಪದ ಪನ್ಯ ಎಸ್ಟೇಟ್ ನಲ್ಲಿ ಪೆಟ್ರೋಲ್ ಸುರಿದು ಪರಾರಿಯಾಗಿದ್ದ ಘಟನೆಗೆ ಸಂಭಂದಿಸಿ ಆರೋಪಿಗಳನ್ನು ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ನಿರ್ದೇಶನದ ಮೇರೆಗೆ ಸುಂಟಿಕೊಪ್ಪದ ಪೊಲೀಸ್ ಉಪ ನಿರೀಕ್ಷಕರು ಹಾಗೂ ಸಿಬ್ಬಂದಿಗಳು ಬಂಧಿಸಿ ಸುಂಟಿಕೊಪ್ಪಕ್ಕೆ ತಂದು ಸ್ಥಳ ಮಹಾಜರು ನಡೆಸಿದ್ದರು.
ಆರೋಪಿಯನ್ನು ಕರೆದೊಯ್ದ ಸಂದರ್ಭ ಓರ್ವ ಮುಖ್ಯ ಆರೋಪಿಯು ಪೊಲೀಸರ ಕಣ್ಣು ತಪ್ಪಿಸಿ ಪರಾರಿಯಾಗಿದ್ದ. ಆತನನ್ನು ಮತ್ತೆ ಹಿಡಿದು ತರಲು ಚಾಲೆಂಜ್ ಆಗಿ ಸ್ವೀಕರಿಸಿದ ಕೊಡಗು ಜಿಲ್ಲೆಯ ಶುಂಠಿ ಕೊಪ್ಪದ ಪೊಲೀಸ್ ಉಪ ನಿರೀಕ್ಷಕರು ಹಾಗೂ ಸಿಬ್ಬಂದಿಗಳು ತಮ್ಮ ಕರ್ತವ್ಯ ನಿಷ್ಠೆ ಮೆರೆದು ಸಾಹಸದಿಂದ ರಾಜಸ್ಥಾನದಿಂದ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿ ಆತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿರುತ್ತಾರೆ.
ಇವರ ಕರ್ತವ್ಯವನಿಷ್ಠೆಯನ್ನು ಮನಗಂಡ ಸೋಶಿಯಲ್ ಡೆಮೊಕ್ರೆಟಿಕ್ ಟ್ರೇಡ್ ಯೂನಿಯನ್ ವತಿಯಿಂದ ಸಾಹಸಿ ಪೊಲೀಸ್ ಅಧಿಕಾರಿ ಚಂದ್ರಶೇಖರ್ ಹಾಗೂ ಸಿಬ್ಬಂದಿಗಳನ್ನು ಕಾರ್ಮಿಕರ ಪರವಾಗಿ ಸನ್ಮಾನಿಸಿದ್ದಾರೆ.
ಈ ಸಂದರ್ಭದಲ್ಲಿ ಕೊಡಗು ಜಿಲ್ಲಾ ಎಸ್ ಡಿ ಟಿ ಯು ಜಿಲ್ಲಾಧ್ಯಕ್ಷರಾದ ಅಣ್ಣ ಶರೀಫ್,ಉಪಾಧ್ಯಕ್ಷರಾದ ಇಬ್ರಾಹಿಂ ಹೊಸ್ತೋಟ. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ ಎ ಅಬ್ದುಲ್ ರಜಾಕ್, ಸಂಘಟನಾ ಕಾರ್ಯದರ್ಶಿ ಲತೀಫ್ ಸುಂಟಿಕೊಪ್ಪ, ಸದಸ್ಯರಾದ ಆಲಿ ಕೂಡಿಗೆ ಯೂನಿಯನ್ ನ ಸದಸ್ಯರು ಉಪಸ್ಥಿತರಿದ್ದರು.