ಪ್ರವಾದಿ ಪೈಗಂಬರ್‌ರವರ ಬಗ್ಗೆ ಅವಹೇಳನಕಾರಿಯಾಗಿ ಬರಹ ಬರೆದು ಬಸ್‌ಸ್ಟ್ಯಾಂಡ್‌ನಲ್ಲಿ ಅಂಟಿಸಿದ ಕಿಡಿಗೇಡಿಯ ಬಂಧನಕ್ಕೆ ಆಗ್ರಹಿಸಿ ಮನವಿ
ಪುತ್ತೂರು: ಪ್ರವಾದಿ ಪೈಗಂಬರ್‌ರವರ ಬಗ್ಗೆ ಅವಹೇಳನಕಾರಿಯಾಗಿ ಬರಹ ಬರೆದು ಬಸ್‌ಸ್ಟ್ಯಾಂಡ್‌ನಲ್ಲಿ ಅಂಟಿಸಿದ ಘಟನೆ ನಡೆದಿದ್ದು ಕೃತ್ಯ ಎಸಗಿದ ಕಿಡಿಗೇಡಿಯ ಬಂಧನಕ್ಕೆ ಆಗ್ರಹಿಸಿ ಈಶ್ವರಮಂಗಲ ವಿವಿಧ ಮುಸ್ಲಿಂ ಸಂಘಟನೆಗಳು ಸಂಪ್ಯ ಗ್ರಾಮಾಂತರ ಪೊಲೀಸ್ ಠಾಣಾ ಎಸ್ಸೈಯವರಿಗೆ ದೂರು ನೀಡಿದ್ದಾರೆ.
ನೆ.ಮುಡ್ನೂರು ಗ್ರಾಮದ ಈಶ್ವರಮಂಗಲ ಸಮೀಪದ ಪುಳಿತ್ತಡಿ ಎಂಬಲ್ಲಿರುವ ಬಸ್‌ಸ್ಟ್ಯಾಂಡ್‌ನ ಗೋಡೆಯಲ್ಲಿ ಪ್ರವಾದಿ ಪೈಗಂಬರ್ ಕುರಿತು ಮತ್ತು ಮುಸ್ಲಿಮರ ಬಗ್ಗೆ ಅವಹೇಳನಕಾರಿಯಾಗಿ ಬರಹ ಬರೆದು ಅಶ್ಲೀಲ ಚಿತ್ರವೊಂದನ್ನು ಬಿಡಿಸಿ ಅದರ ಕೆಳಗೆ ಕೆಟ್ಟ ಶಬ್ದಗಳಿಂದ ಬರೆದಿರುವುದು ಕಂಡು ಬಂದಿದ್ದು ಅವಹೇಳನಕಾರಿ ಬರಹ ಬರೆದಿರುವ ವಿಚಾರ ತಿಳಿದ ಈಶ್ವರಮಂಗಲ ಹೊರಠಾಣಾ ಪೊಲೀಸರು ಬಸ್‌ಸ್ಟ್ಯಾಂಡ್‌ನಲ್ಲಿ ಅಂಟಿಸಿದ್ದ ಚೀಟಿಯನ್ನು ತೆರವು ಮಾಡಿರುವುದಾಗಿ ತಿಳಿದು ಬಂದಿದೆ.