ವಿಮೆನ್ ಇಂಡಿಯಾ ಮೂವ್ಮೆಂಟ್ ಪುತ್ತೂರು ವಿಧಾನಸಭಾ ಕ್ಷೇತ್ರ ಸಮಿತಿ ಪುನರ್ ರಚನೆ
ಪುತ್ತೂರು: ವಿಮೆನ್ ಇಂಡಿಯಾ ಮೂವ್ಮೆಂಟ್ ಪುತ್ತೂರು ವಿಧಾನ ಸಭಾ ಕ್ಷೇತ್ರ ಸಮಿತಿ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಿಕಟ ಪೂರ್ವ ಅಧ್ಯಕ್ಷರಾದ ಝಾಹಿದ ಸಾಗರ್‌ರವರ ನೇತೃತ್ವದಲ್ಲಿ ಪುತ್ತೂರಿನಲ್ಲಿ ನಡೆಯಿತು.
ಕ್ಷೇತ್ರ ಸಮಿತಿಯ ನೂತನ ಅಧ್ಯಕ್ಷರಾಗಿ ಸಜರಾ ಹಮೀದ್ ಆಯ್ಕೆಯಾದರು. ಕಾರ್ಯದರ್ಶಿಯಾಗಿ ಸೌದ ಮಠ, ಉಪಾಧ್ಯಕ್ಷರಾಗಿ ಝರೀನ, ಜೊತೆ ಕಾರ್ಯದರ್ಶಿಯಾಗಿ ಫಾತಿಮಾ ನಿರ್ಮಾ, ಕೋಶಾಧಿಕಾರಿಯಾಗಿ ಫೌಝಿಯಾ ಆಯ್ಕೆಯಾದರು. ಕ್ಷೇತ್ರ ಸಮಿತಿಯ ಸದಸ್ಯರುಗಳಾಗಿ ಸಾಜಿದ ಎಸ್.ಆರ್, ಆರಿಫಾ ಮಸೂದು, ತಸ್ಲೀಮಾ ಅಶ್ರಫ್, ತಾಹೀರಾ ಉಮರ್, ಶಹನಾಝ್ ಮಿತ್ತೂರು, ಝರೀನ ಸಿರಾಜ್, ಸಮೀರಾ ಸಿದ್ದೀಕ್, ನುಸ್ರತ್, ಝೋಹರ ಬನ್ನೂರುಆಯ್ಕೆಯಾದರು. ವಿಮೆನ್ ಇಂಡಿಯಾ ಮೂವ್ಮೆಂಟ್ ರಾಜ್ಯ ಪ್ರದಾನ ಕಾರ್ಯದರ್ಶಿ ನಸ್ರೀಯ ಬೆಳ್ಳಾರೆ ಸಮಿತಿಯ ಆಯ್ಕೆ ಪ್ರಕ್ರಿಯೆಯನ್ನು ನಡೆಸಿಕೊಟ್ಟರು. ಕಾರ್ಯಕ್ರಮದಲ್ಲಿ ಜಿಲ್ಲಾ ವಿಮ್ ಉಸ್ತುವಾರಿಯಾದ ಇಬ್ರಾಹಿಂ ಸಾಗರ್ ಹಾಗೂ ಬ್ಲಾಕ್ ಸಮಿತಿ ಪದಾಧಿಕಾರಿಗಳು ಮತ್ತು ಸದಸ್ಯರುಗಳು ಉಪಸ್ಥಿತರಿದ್ದರು. ಝರೀನ ಸ್ವಾಗತಿಸಿದರು. ಫಾತಿಮಾ ನಿರ್ಮಾ ವಂದಿಸಿದರು.