ಕರಾವಳಿ

ಸುಳ್ಯ: 108 ಆಂಬ್ಯುಲೆನ್ಸ್ ಸೇವೆ  ಸಮಸ್ಯೆ ಬಗೆಹರಿಸುವಂತೆ ಅಕ್ಷಯ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಆರೋಗ್ಯ ಸಚಿವರಿಗೆ ಮನವಿ




ಜಿಲ್ಲಾ ಆರೋಗ್ಯ ಅಧಿಕಾರಿಯವರಿಗೆ ಜಿಲ್ಲಾ ಉಸ್ತುವಾರಿ ಸಚಿವರಿಂದ ಸೂಚನೆ
ಸುಳ್ಯ: ತಾಲೂಕು ಕೇಂದ್ರದಲ್ಲಿ ಕಾರ್ಯ ನಿರ್ವಹಿಸುತ್ತಿರುವ 108 ಆಂಬುಲೆನ್ಸ್ ಗೆ ತಾಲೂಕು ಆಸ್ಪತ್ರೆ ಆವರಣದಲ್ಲಿ ವಾಹನ ನಿಲುಗಡೆಗೆ ಶೆಡ್ ವ್ಯವಸ್ಥೆ, ಮಹಿಳಾ ಸಿಬ್ಬಂದಿ ಗಳಿಗೆ ತಂಗಲು ಕೊಠಡಿ, ಸಿಬ್ಬಂದಿಗಳಿಗೆ ಶೌಚಾಲಯ ವ್ಯವಸ್ಥೆ ನಿರಾಕರಣೆಯಿಂದ ಸುಳ್ಯ ದಲ್ಲಿ 108 ಆಂಬುಲೆನ್ಸ್ ಸೇವೆಯಲ್ಲಿ ವ್ಯತ್ಯಯ ಉಂಟಾಗಿದ್ದು ಇದರಿಂದ 108 ಆಂಬುಲೆನ್ಸ್ ಸೇವೆಯಲ್ಲಿ ಸಮಸ್ಯೆ ಉಲ್ಬಣಿಸುತ್ತಿದ್ದು ತಕ್ಷಣ ಪರಿಹರಿಸುವಂತೆ ಆರೋಗ್ಯ ಸಚಿವರು, ದ. ಕ. ಜಿಲ್ಲಾ ಉಸ್ತುವಾರಿ ಸಚಿವರಾದ ದಿನೇಶ್ ಗುಂಡೂರಾವ್ ರವರಿಗೆ ಟ್ರಸ್ಟ್ ಅಧ್ಯಕ್ಷ ಝಕರಿಯ ನಾರ್ಷ ನೇತೃತ್ವ ದಲ್ಲಿ ಮನವಿ ಸಲ್ಲಿಸಲಾಯಿತು.


ತಕ್ಷಣ ಸ್ಪಂದಿಸಿದ ಸಚಿವರು ಜಿಲ್ಲಾ ಆರೋಗ್ಯ ಅಧಿಕಾರಿಯವರಿಗೆ ಸಮಸ್ಯೆ ಪರಿಹರಿಸುವಂತೆ ಸೂಚನೆ ನೀಡಿದರು ಈ ಸಂದರ್ಭದಲ್ಲಿ ಅಕ್ಷಯ ಚಾರಿಟೇಬಲ್ ಟ್ರಸ್ಟ್ ಗೌರವ ಸಲಹೆ ಗಾರರಾದ ಕೆ. ಎಂ. ಮುಸ್ತಫ ಸುಳ್ಯ ,ಸಂಚಾಲಕ ಕರೀಂ ಕೇದ್ಕರ್, ಪ್ರ. ಕಾರ್ಯದರ್ಶಿ ಸಿದ್ದೀಕ್ ಗೂನಡ್ಕ, ಸಂಘಟನಾ ಕಾರ್ಯದರ್ಶಿ ಸುಳ್ಯ ನ. ಪಂ. ಸದಸ್ಯ ಕೆ. ಎಸ್. ಉಮ್ಮರ್ ಉಪಸ್ಥಿತರಿದ್ದರು

Leave a Reply

Your email address will not be published. Required fields are marked *

error: Content is protected !!