Uncategorized

ಕನ್ನಡ ಮಾಣಿಕ್ಯ ಪ್ರಶಸ್ತಿಗೆ ಗಡಿನಾಡ ಧ್ವನಿ ಪತ್ರಿಕೆಯ ಸಂಪಾದಕ ಡಾ. ಹಾಜಿ ಎಸ್ ಅಬೂಬಕರ್ ಆರ್ಲಪದವು ಆಯ್ಕೆ

ಬೆಂಗಳೂರಿನ ಪ್ರತಿಷ್ಠಿತ ರಂಗಭೂಮಿ ಸಂಸ್ಥೆ ಗೆಜ್ಜೆ ಹೆಜ್ಜೆ ರಂಗ ತಂಡದ ಆಶ್ರಯದಲ್ಲಿ , ಕನ್ನಡದ ಕೈಂಕರ್ಯವನ್ನು ಮಾಡುತ್ತಿರುವ ಸಾಧಕರಿಗೆ ನೀಡಲ್ಪಡುವ ಕನ್ನಡ ಮಾಣಿಕ್ಯ ಪ್ರಶಸ್ತಿಗೆ ವಿವಿಧ ಕ್ಷೇತ್ರಗಳಲ್ಲಿ ವಿಶೇಷ ಸಾಧನೆಗೈಯುತ್ತಿರುವ ಗಡಿನಾಡ ಸಂಘಟಕ ಡಾ.ಹಾಜಿ.ಯಸ್ ಅಬೂಬಕ್ಕರ್ ಆರ್ಲಪದವು ಇವರನ್ನು ಆಯ್ಕೆಮಾಡಲಾಗಿದೆ.


ಇವರು ವಿಜ್ಞಾನ ಪರಿಷತ್ತಿನ ಜಿಲ್ಲಾಧ್ಯಕ್ಷರಾಗಿ, ಪುತ್ತೂರು ಕನ್ನಡ ಸಾಹಿತ್ಯ ಪರಿಷತ್ತಿನ ಆಡಳಿತ ಸಮಿತಿ ಸದಸ್ಯರಾಗಿ,ಗಡಿನಾಡ ಶ್ರೇಯೋಭಿವೃದ್ಧಿ ಟ್ರಸ್ಟ್ ಅಧ್ಯಕ್ಷರಾಗಿ , ಸಿಎಸ್ ಸಿ ವಿಎಲ್ಇ ಸೊಸೈಟಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ,ಪುತ್ತೂರು ಸೀರತ್ ಕಮಿಟಿ ಕಾರ್ಯದರ್ಶಿಯಾಗಿ,ಶಿಕ್ಷಣ ಸಂಪನ್ಮೂಲ ಕೇಂದ್ರ ತಾಲೂಕು ಉಪಾಧ್ಯಕ್ಷ ,ಗಡಿನಾಡ ಧ್ವನಿ ಪತ್ರಿಕೆ ಸಂಪಾದಕರಾಗಿ, ಗಡಿನಾಡ ಸಮ್ಮೇಳನದ ರೂವಾರಿಯಾಗಿ ಅಲ್ಲದೆ ಹಲವಾರು ಸಂಘ ಸಂಸ್ಥೆಗಳ ಸಾರಥಿಗಳಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

Leave a Reply

Your email address will not be published. Required fields are marked *

error: Content is protected !!