ಕರಾವಳಿ

RBI ರಾಷ್ಟ್ರ ಮಟ್ಟದ ಸ್ಪರ್ಧೆ: ಕುಂಬ್ರ ಮರ್ಕಝುಲ್ ಹುದಾ ಡಿಗ್ರಿ ವಿದ್ಯಾರ್ಥಿನಿಯರು ಆಯ್ಕೆ

ಪುತ್ತೂರು: RBI ಆಯೋಜಿಸಿದ ರಾಷ್ಟ್ರ ಮಟ್ಟದ ಆನ್ಲೈನ್ ಕ್ವಿಜ್ ಸ್ಪರ್ಧೆಯಲ್ಲಿ ಭಾಗವಹಿಸಿದ ಕುಂಬ್ರ ಮರ್ಕಝುಲ್ ಹುದಾ ಮಹಿಳಾ ಫಸ್ಟ್ ಗ್ರೇಡ್ ಕಾಲೇಜಿನ ದ್ವಿತೀಯ ಬಿ.ಕಾಂ ವಿಭಾಗದ ವಿದ್ಯಾರ್ಥಿನಿಯರಾದ ಇಸ್ಮತ್ ಕಾವು (D/O ಇಸ್ಮಾಯಿಲ್) ಫಾತಿಮತ್ ಮುರ್ಶಿದಾ ಎಣ್ಮೂರು ( D/O ಅಬೂಬಕ್ಕರ್) ಇವರು ಪ್ರಥಮ ಹಂತದ ಸ್ಪರ್ಧೆಯಲ್ಲಿ ಆಯ್ಕೆಗೊಂಡಿದ್ದು ನವಂಬರ್ 14 ರಂದು ಬೆಂಗಳೂರಿನಲ್ಲಿ ನಡೆಯುವ ರಾಜ್ಯ ಮಟ್ಟದ ಸ್ಪರ್ಧೆಗೆ ಆಯ್ಕೆಗೊಂಡಿದ್ದಾರೆ.

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ನಡೆಸುವ ರಾಷ್ಟ್ರ ಮಟ್ಟದ ಈ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ರೂ.ಹತ್ತು ಲಕ್ಷ ನಗದು ಬಹುಮಾನವನ್ನು ಘೋಷಿಸಿದ್ದು ರಾಷ್ಟ್ರ ಮಟ್ಟದ ಆಯ್ಕೆಗೆ ವಿವಿಧ ಇತರ ನಗದು ಬಹುಮಾನವನ್ನೂ ಪ್ರಕಟಿಸಿರುತ್ತದೆ ಎಂದು ಮೀಡಿಯಾ ಮರ್ಕಝ್ ಕುಂಬ್ರ ಪ್ರಕಟಣೆಯಲ್ಲಿ ತಿಳಿಸಿದೆ.

Leave a Reply

Your email address will not be published. Required fields are marked *

error: Content is protected !!