ತಿಂಗಳಾಡಿ: ವ್ಯಕ್ತಿಗೆ ಹಲ್ಲೆ, ಆರೋಪಿಗಳು ಪೊಲೀಸ್ ವಶಕ್ಕೆ
ಪುತ್ತೂರು: ವ್ಯಕ್ತಿಯೋರ್ವರಿಗೆ ಮೂವರು ಯುವಕರು ಹಲ್ಲೆ ನಡೆಸಿದ ಘಟನೆ ಅ. 20ರಂದು ಸಂಜೆ ತಿಂಗಳಾಡಿಯಲ್ಲಿ ನಡೆದಿದೆ. ಜಾಗದ ತಕರಾರಿಗೆ ಸಂಬಂಧಿಸಿದಂತೆ ಹಲ್ಲೆ ನಡೆಸಲಾಗಿದೆ ಎನ್ನಲಾಗಿದೆ.
ಕೆದಂಬಾಡಿ ಗ್ರಾಮದ ಚಾವಡಿ ನಿವಾಸಿ ರಘುನಾಥ ರೈ ಎಂಬವರ ಮೇಲೆ ಹಲ್ಲೆ ನಡೆಸಲಾಗಿದೆ. ರಘುನಾಥ ರೈ ತಿಂಗಳಾಡಿಯಲ್ಲಿದ್ದ ವೇಳೆ ಸುದೀನ್ ಹಾಗೂ ಆತನ ಸ್ನೇಹಿತರಾದ ನಿಶಾಂತ್ ಮತ್ತು ವಿಜೇತ್ ಎಂಬವರು ರಘುನಾಥ್ ರೈ ಅವರನ್ನು ಹಿಡಿದುಕೊಂಡು ಅವರ ತಲೆಯನ್ನು ಗೋಡೆಗೆ ಜಜ್ಜಿ ಹಲ್ಲೆ ನಡೆಸಿದ್ದಾರೆ. ಈ ವೇಳೆ ರಘುನಾಥ್ ರೈ ಅವರ ತಲೆ ಹೊಡೆದು ರಕ್ತ ಸೋರಿಕೆಯಾಗಿದೆ. ಚುನಾವಣಾ ಸಂಬಂಧಿ ಪಂಚಾಯತ್ ಗೆ ಬಂದೋಬಸ್ತಿಗೆ ಬಂದಿದ್ದ ಸಂಪ್ಯ ಠಾಣಾ ಪೊಲೀಸ್ ಓರ್ವರು ಇವರ ಗಲಾಟೆಯನ್ನು ಗಮನಿಸಿ ತಕ್ಷಣವೇ ಸ್ಥಳಕ್ಕೆ ಬಂದು ಆರೋಪಿಗಳನ್ನು ಹಿಡಿದುಕೊಂಡಿದ್ದಾರೆ. ಗಾಯಾಳು ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಆರೋಪಿಗಳನ್ನು ಸಂಪ್ಯ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.