ಮತ್ತೊಮ್ಮೆ ಮಾನವೀಯತೆ ಮೆರೆದು ಸುದ್ದಿಯಾದ ಲುಲು ಗ್ರೂಪ್ ಮಾಲೀಕ ಯೂಸುಫ್ ಅಲಿ
ಲುಲು ಗ್ರೂಪ್ ಮಾಲೀಕ ಎಂಎ ಯೂಸುಫ್ ಅಲಿ ಮಾನವೀಯತೆಯ ಮೂಲಕ ಮತ್ತೊಮ್ಮೆ ಸುದ್ದಿಯಾಗಿದ್ದಾರೆ. ಕೇರಳದ ಬಡ ಕುಟುಂಬವೊಂದು ರೂ 4 ಲಕ್ಷ ಮನೆ ಸಾಲವನ್ನು ಪಡೆದುಕೊಂಡಿದ್ದು ಅದು ಬಡ್ಡಿ ಮೇಲೆ ಬಡ್ಡಿ ಬೆಳೆದು 8 ಲಕ್ಷ ರೂ. ಆಗಿತ್ತು. ಇಬ್ಬರು ಮಕ್ಕಳನ್ನು ಸಾಕಿಕೊಂಡು ಜೀವನ ಸಾಗಿಸುತ್ತಿದ್ದ ಒಂಟಿ ಮಹಿಳೆಗೆ ಅಷ್ಟು ಹಣ ಕಟ್ಟುವ ಶಕ್ತಿ ಇರಲಿಲ್ಲ. ಅಷ್ಟರಲ್ಲಿ ಲುಲು ಗ್ರೂಪ್ ಮಾಲೀಕ ಎಂಎ ಯೂಸುಫ್ ಅಲಿ ಕುಟುಂಬಕ್ಕೆ ಆಪತ್ಭಾಂದವ ಆಗಿದ್ದಾರೆ.
ಖಾಸಗಿ ಸಂಸ್ಥೆಯ ಅಧಿಕಾರಿಗಳು ಆಕೆಯ ಮನೆಗೆ ಬೀಗ ಹಾಕಿತ್ತು, ಈ ಘಟನೆ ಮಾಧ್ಯಮಗಳ ಗಮನ ಸೆಳೆಯಿತು. ಲುಲು ಗ್ರೂಪ್‌ನ ಅಧ್ಯಕ್ಷ ಎಂಎ ಯೂಸುಫ್ ಅಲಿ ಅವರು ಈ ಬಗ್ಗೆ ತಿಳಿದಾಗ, ಅವರು ಮಹಿಳೆಯ ಸಾಲವನ್ನು ಪಾವತಿಸುವುದಲ್ಲದೆ, ಆಕೆಗೆ ನಿಶ್ಚಿತ ಠೇವಣಿ ಪ್ರಾರಂಭಿಸಲು ಹೆಚ್ಚುವರಿ 10 ಲಕ್ಷ ರೂ. ನೀಡಿದ್ದಾರೆ.
2019 ರಲ್ಲಿ ತನ್ನ ಮನೆಯನ್ನು ನಿರ್ಮಿಸಲು ಕೇರಳ ಮೂಲದ ಫೈನಾನ್ಸ್ ವೊಂದರಿಂದ ಇವರು ರೂ 4 ಲಕ್ಷ ಸಾಲ ಪಡೆದಿದ್ದರು. ಆದರೆ, 2021 ರಲ್ಲಿ, ಅವರ ಪತಿ ನಿಧನರಾದರು. ಇಬ್ಬರು ಮಕ್ಕಳನ್ನು ಸಾಕಿಕೊಂಡು ಸಾಲ ಮರುಪಾವತಿಸಲು ನಿಧವೆಗೆ ಸಾಧ್ಯವಾಗಿಲ್ಲ. ವರ್ಷಗಳಲ್ಲಿ, ಬಡ್ಡಿ ಮೇಲೆ ಬಡ್ಡಿ ಬೆಳೆದು ಬಾಕಿ ಮೊತ್ತವು ದ್ವಿಗುಣಗೊಂಡಿದೆ. ಇದು ಅನೇಕ ನೋಟಿಸ್ ಗಳ ಬಳಿಕ ಸ್ವತ್ತುಮರುಸ್ವಾಧೀನ ಪ್ರಕ್ರಿಯೆಗಳನ್ನು ಪ್ರಾರಂಭಿಸಲು ಬ್ಯಾಂಕ್ ಮುಂದಾಗಿತ್ತು. ಎಂ.ಎ ಯೂಸುಫ್ ಅಲಿ ಅವರು ಈ ಬಗ್ಗೆ ತಿಳಿದಾಗ ಮಹಿಳೆಯ ಸಾಲವನ್ನು ಪಾವತಿಸಿ ಮಾನವೀಯತೆ ಮೆರೆದಿದ್ದಾರೆ.