ಸವಣೂರು: ಮನೆಗೆ ನುಗ್ಗಿ ಲಕ್ಷಾಂತರ ರೂ ಮೌಲ್ಯದ ಚಿನ್ನ, ಹಣ ಕಳ್ಳತನ
ಪುತ್ತೂರು: ಮನೆಗೆ ನುಗ್ಗಿದ ಕಳ್ಳರು ಕಳ್ಳತನ ನಡೆಸಿದ ಘಟನೆ ಸವಣೂರಿನಲ್ಲಿ ನಡೆದಿದೆ.
ಸಲೀಂ ಕೆ ಎಂಬವರು ತಮ್ಮ ಮನೆಯ 11.10.2024 ರಂದು ಬೆಳಿಗ್ಗೆ ಮನೆಗೆ ಬೀಗ ಹಾಕಿ, ಪತ್ನಿ ಹಾಗೂ ಮಕ್ಕಳೊಂದಿಗೆ ಟ್ರಿಪ್ ಗೆಂದು ಹೋಗಿದ್ದು, ವಾಪಸ್ಸು ಟ್ರಿಪ್ ಮುಗಿಸಿಕೊಂಡು 13.10.2024 ರಂದು ಮದ್ಯರಾತ್ರಿ ಮನೆಗೆ ಬಂದಾಗ ಮನೆಯ ಎದುರುಗಡೆಯ ಬಾಗಿಲಿಗೆ ಅಳವಡಿಸಿದ್ದ ಬೀಗವು ಮುರಿದಿರುವುದು ಕಂಡುಬಂದಿದೆ.
ಸಲೀಂ ಅವರು ಎದುರಿನ ಬಾಗಿಲಿನಿಂದಾಗಿ ಒಳಪ್ರವೇಶಿಸಿ ಮಲಗುವ ಕೋಣೆಗಳನ್ನು ನೋಡಿದಾಗ, ಅಲ್ಲಿದ್ದ ಗೋಡ್ರೆಜಿನ ಬಾಗಿಲು ಮುರಿದಿದ್ದು, ಬಟ್ಟೆಗಳು ಚೆಲ್ಲಾಪಿಲ್ಲಿಯಾಗಿ ನೆಲದಲ್ಲಿ ಹರಡಿದ್ದು, ಗೋಡ್ರೆಜಿನಲ್ಲಿದ್ದ 53 ಗ್ರಾಂ ಚಿನ್ನದ ಆಭರಣಗಳು ( ಅಂದಾಜು ಮೌಲ್ಯ 2,12,000), ಸಾಕ್ಸಿಂಗ್ ಕಂಪೆನಿಯ ಟಾಬ್ -1 ( ಅಂದಾ ಜು ಮೌಲ್ಯ ರೂ 4000) TISSOT ವಾಚ್ -1 (ಅಂದಾಜು ಮೌಲ್ಯ ರೂ 15000) ಹಾಗೂ ನಗದು ಸುಮಾರು 30,000 ರೂ. ಹಣ ಕಳವು ಆಗಿರುವುದು ಕಂಡು ಬಂದಿದೆ. ಈ ಬಗ್ಗೆ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಅ.ಕ್ರ . 80/2024 ಕಲಂ 331(3),331(4),305ಬಿ ಎನ್ ಎಸ್ ರಂತೆ ಪ್ರಕರಣ ದಾಖಲಾಗಿದೆ.