ಮಂಗಳೂರು: ಖಾಸಗಿ ಬಸ್ ಸಿಬ್ಬಂದಿಗಳ ನಡುವೆ ಡಿಶುಂ ಡಿಶುಂ
ಮಂಗಳೂರು: ಖಾಸಗಿ ಬಸ್ ಸಿಬ್ಬಂದಿಗಳು ಪ್ರಯಾಣಿಕರ ಎದುರೇ ಹೊಡೆದಾಡಿಕೊಂಡಿದ್ದಾರೆ. ಇವರ ಈ ವರ್ತನೆಗೆ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿಟ್ಲ-ಮಂಗಳೂರಿಗೆ ಬರುವ ಖಾಸಗಿ ಬಸ್ ಹಾಗೂ ಪುತ್ತೂರು-ಮಂಗಳೂರು ಮಧ್ಯೆ ಸಂಚರಿಸುವ ಬಸ್ ಸಿಬ್ಬಂದಿಗಳು ಪ್ರಯಾಣಿಕರ ಕಣ್ಮುಂದೆಯೇ ಪರಸ್ಪರ ಬಡಿದಾಡಿಕೊಂಡಿದ್ದಾರೆ. ಉಗುಳುವ ವೇಳೆ ಇನ್ನೊಂದು ಬಸ್ ಸಿಬ್ಬಂದಿಗೆ ಬಿತ್ತೆಂಬ ನೆಪದಲ್ಲಿ ಸಿಬ್ಬಂದಿಗಳು ಪರಸ್ಪರ ಬಡಿದಾಡಿಕೊಂಡಿದ್ದಾರೆ ಎನ್ನಲಾಗಿದೆ. ಬಸ್ಸಿನ ಹೊರಗೂ, ಒಳಗೂ ಇವರು ಹೊಡೆದಾಡಿಕೊಂಡಿದ್ದು ಪರಸ್ಪರ ಬೈದುಕೊಂಡು, ಪ್ರಯಾಣಿಕರ ಎದುರಲ್ಲೇ ಹೊಡೆದಾಡಿಕೊಂಡಿದ್ದಾರೆ.