ಕರಾವಳಿ

ಫಾಳಿಲಾ-ಫಳೀಲಾ ರಾಜ್ಯ ಮಟ್ಟದ ‘ಹಿಯಾ ಫಿಯೆಸ್ಟ’ ಕಾರ್ಯಕ್ರಮ

ಪುತ್ತೂರು: ಧಾರ್ಮಿಕ ಶಿಕ್ಷಣದ ಜೊತೆಗೆ ಲೌಕಿಕ  ಶಿಕ್ಷಣವನ್ನೂ ಪಡೆಯುವುದು ಕಾಲದ ಬೇಡಿಕೆಯಾಗಿದ್ದು ಈ  ನಿಟ್ಟಿನಲ್ಲಿ ಧಾರ್ಮಿಕ ಶ್ರದ್ಧೆ ಮತ್ತು ಭಕ್ತಿಯೊಂದಿಗಿನ  ಸುಸಂಸ್ಕೃತ ಸಮಾಜ ಕಟ್ಟುವಲ್ಲಿ ‘ಸಮಸ್ತ’ ಬೋರ್ಡ್ ನ ಅಧೀನದಲ್ಲಿ ಮಹಿಳೆಯರಿಗಾಗಿ ಫಾಳಿಲಾ- ಫಳೀಲಾ  ಸಮನ್ವಯ ಶಿಕ್ಷಣ ವ್ಯವಸ್ಥೆಯನ್ನು ಮಾಡಲಾಗಿದೆ, ಹಾಗೂ ವಿದ್ಯಾರ್ಥಿಗಳಲ್ಲಿರುವ ಪ್ರತಿಭೆಗಳನ್ನು ಪೋಷಿಸುವ  ಸಲುವಾಗಿ ಹಿಯಾ ಫಿಯೆಸ್ಟ ಕಾರ್ಯಕ್ರಮಗಳನ್ನು  ಆಯೋಜಸಲಾಗಿದೆ ಎಂದು ಕೌನ್ಸಿಲ್ ಆಫ್ ಸಮಸ್ತ  ವುಮೆನ್ಸ್ ಕಾಲೇಜ್ ಗಳ ಕೇಂದ್ರೀಯ ಕೋ ಆರ್ಡಿನೇಟರ್ ಸಅದ್ ಫೈಝಿ ಮಲಪ್ಪುರಂ ಹೇಳಿದರು.

ಅವರು ಅ.9ರಂದು ನೇರಳಕಟ್ಟೆ ಜನಪ್ರಿಯ ಗಾರ್ಡನ್‌ನಲ್ಲಿ ನಡೆದ ಫಾಳಿಲಾ-ಫಳೀಲಾ ಕರ್ನಾಟಕ ರಾಜ್ಯ ಮಟ್ಟದ ಹಿಯಾ ಫಿಯೆಸ್ಟ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಸಿ.ಎಸ್.ಡಬ್ಲ್ಯು.ಸಿ ಕರ್ನಾಟಕ ರಾಜ್ಯ ಸಮಿತಿಯ ಅಧ್ಯಕ್ಷ ಅಬ್ದುರ್ರಶೀದ್ ಹಾಜಿ ಪರ್ಲಡ ಅಧ್ಯಕ್ಷತೆ ವಹಿಸಿದ್ದರು. ಸಾಲ್ಮರ ಮೌಂಟನ್ ವ್ಯೂ ಸಮೂಹ ಶಿಕ್ಷಣ ಸಂಸ್ಥೆಯ ಪ್ರ.ಕಾರ್ಯದರ್ಶಿ ಯು.ಮುಹಮ್ಮದ್ ಹಾಜಿ ಪಡೀಲ್, ಪುತ್ತೂರು ರೇಂಜ್ ಕೋಶಾಧಿಕಾರಿ ಎಲ್.ಟಿ ಅಬ್ದುಲ್  ರಝಾಕ್ ಹಾಜಿ, ಕೋಡಿಂಬಾಡಿ ಜುಮಾ ಮಸೀದಿ ಅಧ್ಯಕ್ಷ ಉಮರ್ ಹಾಜಿ ಕೋಡಿಂಬಾಡಿ, ಇಸ್ಮಾಯಿಲ್ ಹಾಜಿ  ಜನಪ್ರಿಯ, ಎಸ್.ವೈ.ಎಸ್ ದ.ಕ ಜಿಲ್ಲಾ ಸಮಿತಿ ಪ್ರಮುಖರಾದ ಸ್ವಾಗತ್ ಅಬೂಬಕ್ಕರ್ ಹಾಜಿ ದೇರಳಕಟ್ಟೆ, ಕತ್ತಾರ್ ಇಬ್ರಾಹಿಂ ಹಾಜಿ ಸುಳ್ಯ, ಮುಸ್ತಫಾ ಫೈಝಿ ಕಿನ್ಯ,  ಪುತ್ತೂರು ನಗರ ಸಭಾ ಸದಸ್ಯ ರಿಯಾಝ್ ವಳತ್ತಡ್ಕ,  ಆರಿಫ್ ಸಂಪ್ಯ, ಎಸ್ಕೆಎಸ್ಸೆಸೆಫ್ ರಾಜ್ಯ ಸಮಿತಿಯ ಇಸ್ಮಾಯಿಲ್ ಯಮಾನಿ, ಬಾತಿಷಾ ಹಾಜಿ ಪಾಟ್ರಕೋಡಿ, ಉದ್ಯಮಿಗಳಾದ ಅಶ್ರಫ್ ಪರ್ಲಡ್ಕ, ನೌಫಲ್ ತಿಂಗಳಾಡಿ, ಇಕ್ಬಾಲ್ ಶೀತಲ್ ವಿಟ್ಲ, ಇಸ್ಮಾಯಿಲ್ ಶಾಫಿ, ವಿವಿಧ ಕಾಲೇಜುಗಳ ಪ್ರತಿನಿಧಿಗಳಾದ ಬಾತಿಷಾ ಅಝ್ಹರಿ ಉಪ್ಪಿನಂಗಡಿ, ಅಬ್ದುಲ್ ನಾಸಿರ್ ದಾರಿಮಿ ಕಲ್ಲುಗುಂಡಿ, ಸಅದ್ ಫೈಝಿ ಕಲ್ಲುಗುಂಡಿ, ಆರಿಫ್ ತೋಡಾರ್, ಸಿದ್ದೀಕ್ ಯಮಾನಿ ಮಿತ್ತಬೈಲು, ಬಿ.ಕೆ ಅಬ್ದುಲ್ ಅಝೀಝ್ ಆತೂರು ಉಪಸ್ಥಿತರಿದ್ದರು. ಫಾಳಿಲಾ ಕೇಂದ್ರೀಯ ಸಹ ಕೋಅರ್ಡಿನೇಟರ್ ಮುಬಶ್ಶಿರ್ ಫೈಝಿ ಮಲಪ್ಪುರಂ ಪ್ರಾರ್ಥನೆ ನಡೆಸಿದರು. ’ಸಮಸ್ತ’ ಕೇಂದ್ರ ಮುಶಾವರ ಸದಸ್ಯರದ ಬಿ.ಕೆ ಅಬ್ದುಲ್ ಖಾದಿರ್ ಅಲ್ ಖಾಸಿಮಿ ವೀಡಿಯೋ ಸಂದೇಶ ನೀಡಿದರು. ಸಿ.ಎಸ್.ಡಬ್ಲ್ಯೂ.ಸಿ ಕರ್ನಾಟಕ ಸಮಿತಿಯ ಪ್ರ.ಕಾರ್ಯದರ್ಶಿ ಕೆ.ಎಂ.ಎ ಕೊಡುಂಗಾಯಿ ಫಾಝಿಲ್ ಹನೀಫಿ ಸ್ವಾಗತಿಸಿದರು. ಫೆಸ್ಟ್ ಸ್ವಾಗತ ಸಮಿತಿ ಅಧ್ಯಕ್ಷ ದಾವೂದ್ ಹನೀಫಿ ವಿಟ್ಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಮಿತಿಯ ಐ.ಟಿ ಕೋಆರ್ಡಿನೇಟರ್ ತಾಜುದ್ದೀನ್ ರಹ್ಮಾನಿ ದೇರಳಕಟ್ಟೆ ವಂದಿಸಿದರು.

Leave a Reply

Your email address will not be published. Required fields are marked *

error: Content is protected !!