ಕರಾವಳಿಕ್ರೈಂ

ಪುತ್ತೂರು: ಕೆಯ್ಯೂರಿನಲ್ಲಿ‌ ಮಹಿಳೆಯ ಮಾನಭಂಗ ಯತ್ನ ಆರೋಪ, ಪೊಲೀಸ್ ದೂರು






ಪುತ್ತೂರು: ಕೆಯ್ಯೂರಿನಲ್ಲಿ ಮಹಿಳೆಯೋರ್ವರ ಮಾನಭಂಗ ಯತ್ನ ನಡೆದಿದೆ ಎನ್ನಲಾಗಿದ್ದು, ಮಹಿಳೆಯ ದೂರಿನ ಮೇರೆಗೆ ಪುತ್ತೂರು ಗ್ರಾಮಾಂತರ ಠಾಣಾ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಸೆ.27ರಂದು ಮಹಿಳೆಯೋರ್ವರು ಪಡಿತರ ಅಕ್ಕಿ ಪಡೆಯಲು ಕೆಯ್ಯೂರು ರೇಷನ್ ಅಂಗಡಿಗೆ ಬಂದಿದ್ದು ಈ ವೇಳೆ ಅಂಗಡಿ ಸಿಬ್ಬಂದಿ ಮಹಿಳೆಯ ಮೇಲೆ ಕೈ ಹಾಕಿ ಮಾನಭಂಗಕ್ಕೆ ಯತ್ನ ನಡೆಸಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾರೆ. ಈ ಬಗ್ಗೆ ಮಹಿಳೆ ಸಂಪ್ಯ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ ಎಂದು ತಿಳಿದು ಬಂದಿದೆ.

Leave a Reply

Your email address will not be published. Required fields are marked *

error: Content is protected !!