ಸುಳ್ಯ: ಓಮ್ನಿಯೊಳಗೆ ವ್ಯಕ್ತಿಯ ಮೃತದೇಹ ಪತ್ತೆ
ಸುಳ್ಯದ ಪರಿವಾರಕಾನ ಸಮೀಪ ರಸ್ತೆ ಬದಿ ಕಳೆದ ಕೆಲವು ದಿನಗಳಿಂದ ನಿಲ್ಲಿಸಿದ್ದ ಓಮ್ನಿ ಕಾರಿನಲ್ಲಿ ಕೊಳೆತ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದ್ದು ಅನುಮಾನಗಳಿಗೂ ಕಾರಣವಾಗಿದೆ.

ಕೆಲ ದಿನಗಳಿಂದ ಈ ಓಮ್ನಿ ಕಾರು ಇಲ್ಲಿ ನಿಲ್ಲಿಸಿಕೊಂಡಿತ್ತು ಎನ್ನಲಾಗಿದ್ದು ಓಮ್ನಿಯಲ್ಲಿ ಶವ ಪತ್ತೆಯಾಗಿದೆ. ಕೊಳೆತ ಸ್ಥಿತಿಯಲ್ಲಿ ಶವ ಇತ್ತು. ಮಾಹಿತಿ ಪ್ರಕಾರ ಮೃತ ವ್ಯಕ್ತಿ ಕಲ್ಲಮುಟ್ಲು ನಿವಾಸಿ ಮನೋಹರ್ ಎನ್ನಲಾಗಿದೆ. ಮನೋಹರ್ ಮದ್ಯ ವ್ಯಸನಿಯಾಗಿದ್ದರು ಎನ್ನಲಾಗುತ್ತಿದೆಯಾದರೂ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ. ಪೊಲೀಸ್ ತನಿಖೆಯಿಂದಷ್ಟೇ ಸ್ಪಷ್ಟ ಮಾಹಿತಿ ಲಭ್ಯವಾಗಲಿದೆ.