ದ.ಕ ಜಿಲ್ಲಾ ಎಸ್ಪಿ ನೇತೃತ್ವದಲ್ಲಿ ಜಿಲ್ಲಾ ಮಟ್ಟದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸಭೆ

ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮಾಸಿಕ ಸಭೆಯು ಬಂಟ್ವಾಳ ಡಿವೈಎಸ್ಪಿ ಕಚೇರಿಯಲ್ಲಿ ಜಿಲ್ಲಾ ಎಸ್ಪಿ ಯತೀಶ್ ಎನ್ ಅವರ ಅಧ್ಯಕ್ಷತೆಯಲ್ಲಿ ಸೆ.23ರಂದು ನಡೆಯಿತು.

ಸಭೆಯಲ್ಲಿ ದ
.ಕ ಎಡಿಶನಲ್
ಎಸ್ಪಿ ರಾಜೇಂದ್ರ ಡಿ ಎಸ್, ಬಂಟ್ವಾಳ ಡಿವೈಎಸ್ಪಿ ವಿಜಯ ಪ್ರಸಾದ್ ಎಸ್, ಪುತ್ತೂರು ಎಎಸ್ಪಿ ಅರುಣ್ ನಾಗೇಗೌಡ, ಜಾರಿ ನಿರ್ದೇಶನಾಲಯದ
ಪೊಲೀಸ್ ನಿರೀಕ್ಷಕರು ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಪ್ರಮುಖರು ಭಾಗವಹಿಸಿದ್ದರು.