ಭಕ್ತಕೋಡಿ: ಗಾಯಗೊಂಡು ರಸ್ತೆ ಬದಿ ಹೊರಳಾಡುತ್ತಿದ್ದ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ
ಪುತ್ತೂರು: ಅನಾರೋಗ್ಯಕ್ಕೀಡಾಗಿ ಎರಡು ದಿನಗಳಿಂದ ಮಲಗಿದ್ದಲ್ಲೇ ಇದ್ದ ವ್ಯಕ್ತಿಯೋರ್ವರನ್ನು ಉಪಚರಿಸಿ ಆಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ದಾಖಲಿಸಿರುವ ಘಟನೆ ಸರ್ವೆ ಗ್ರಾಮ ಭಕ್ತಕೋಡಿಯಲ್ಲಿ ಸೆ.11ರಂದು ನಡೆದಿದೆ.
ಸರ್ವೆ ಗ್ರಾಮದ ಅಣ್ಣು ಎಂಬವರು ಭಕ್ತಕೋಡಿಯಲ್ಲಿ ಕಟ್ಟಡವೊಂದರ ಹೊರಗಡೆ ರಾತ್ರಿ ವೇಳೆ ಮಲಗಿದ್ದು ಅವರು ಅಲ್ಲಿಂದ ಆಯತಪ್ಪಿ ಕೆಳಗೆ ಬಿದ್ದಿದ್ದರು ಎನ್ನಲಾಗಿದೆ. ಸೊಂಟಕ್ಕೆ ತೀವ್ರ ಗಾಯಗೊಂಡಿದ್ದ ಅವರು ನಡೆದಾಡಲೂ ಸಾಧ್ಯವಾಗದೇ ಹೊರಳಾಡುತ್ತಿದ್ದರು. ಇದನ್ನು ಗಮನಿಸಿದ ಸರ್ವೆ ಸೌಹಾರ್ದ ವೇದಿಕೆಯ ಅಧ್ಯಕ್ಷ ಕೆ.ಎಂ ಹನೀಫ್ ರೆಂಜಲಾಡಿಯವರು ಅಣ್ಣು ಅವರನ್ನು ಪ್ರಾಥಮಿಕವಾಗಿ ಉಪಚರಿಸಿ ಬಳಿಕ 108 ಸಂಖ್ಯೆಯ ಆಂಬ್ಯಲೆನ್ಸ್‌ಗೆ ಕರೆ ಮಾಡಿ ಮಾಹಿತಿ ನೀಡಿದ್ದು ಬಳಿಕ ಆಂಬ್ಯಲೆನ್ಸ್ ಮೂಲಕ ಆಸ್ಪತ್ರೆಗೆ ದಾಖಲಿಸುವಲ್ಲಿಯೂ ನೆರವಾದರು. ಸ್ಥಳೀಯ ಆಟೋ ರಿಕ್ಷಾ ಚಾಲಕರು ಸಹಕಾರ ನೀಡಿದರು.
ಸರ್ವೆ ಸೌಹಾರ್ದ ವೇದಿಕೆಯ ಅಧ್ಯಕ್ಷರ ಮಾನವೀಯ ಕಳಕಳಿಗೆ ಪ್ರಶಂಸೆ ವ್ಯಕ್ತವಾಗಿದೆ.