ಮಲೈಕಾ ಆರೋರಾ ತಂದೆ ಆತ್ಮಹತ್ಯೆ; ಮರಣೋತ್ತರ ಪರೀಕ್ಷಾ ವರದಿಯಲ್ಲಿ ಏನಿದೆ?
ಮುಂಬಯಿ: ಬಾಲಿವುಡ್ ನಟಿ ಮಲೈಕಾ ಆರೋರಾ ಅವರ ತಂದೆ ಆತ್ಮಹತ್ಯೆ ಮಾಡಿಕೊಂಡ ವಿಚಾರಕ್ಕೆ ಸಂಬಂಧಿಸಿ ಮರಣೋತ್ತರ ಪರೀಕ್ಷೆಯ ವರದಿ ಹೊರಬಿದ್ದಿದೆ.

ಸೆ.11ರಂದು ಬಾಂದ್ರಾದಲ್ಲಿರುವ ತನ್ನ ನಿವಾಸದಿಂದ ಹಾರಿ ಅನಿಲ್ ಮೆಹ್ತಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬಾಂದ್ರಾದ ಬಾಬಾ ಆಸ್ಪತ್ರೆಯಲ್ಲಿ ಅವರ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ಅದರ ವರದಿ ಹೊರಬಿದ್ದಿದೆ.
ಕಟ್ಟಡದಿಂದ ಹಾರಿದ ಪರಿಣಾಮ ಅನಿಲ್ ಮೆಹ್ತಾ ಅವರಿಗೆ ಬಹು ಗಾಯಗಳಾಗಿವೆ ಇದರಿಂದಲೇ ಅವರು ಮೃತಪಟ್ಟಿರುವುದಾಗಿ ಮರಣೋತ್ತರ ಪರೀಕ್ಷಾ ವರದಿಯಲ್ಲಿ ಉಲ್ಲೇಖಿಸಲಾಗಿದೆ ಎಂದು ಪೊಲೀಸ್ ಮೂಲಗಳು ಹೇಳಿರುವುದಾಗಿ ವರದಿಯಾಗಿದೆ .