ಬೃಹತ್ ಗಾತ್ರದ ಮೊಸಳೆಯನ್ನು ರಕ್ಷಿಸಿ ಸ್ಕೂಟರ್’ನಲ್ಲಿ ಕೊಂಡುಹೋದ ಯುವಕರು
ಮೊಸಳೆಯನ್ನು ಇಬ್ಬರು ಸ್ಕೂಟರ್ ನಲ್ಲಿ ಕೊಂಡು ಹೋಗುತ್ತಿರುವ ದೃಶ್ಯವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಗುಜರಾತ್‌ನಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಭೀಕರ ಪ್ರವಾಹದ ನಂತರ ಮೊಸಳೆಗಳು ಮನೆಗಳ ಮಹಡಿಗಳಲ್ಲಿ ಆಶ್ರಯ ಪಡೆದ ಸುದ್ದಿ ವರದಿಯಾಗಿತ್ತು. ವಡೋದರದಲ್ಲಿ ಸುಮಾರು 40 ಮೊಸಳೆಗಳನ್ನು ವಸತಿ ಪ್ರದೇಶಗಳಿಂದ ರಕ್ಷಿಸಲಾಗಿದೆ ಎಂದು ತಿಳಿದು ಬಂದಿದೆ.
ರಕ್ಷಣಾ ಕಾರ್ಯಾಚರಣೆಯ ಬಳಿಕ ಇಬ್ಬರು ಸ್ಕೂಟರ್‌ನಲ್ಲಿ ಬೃಹತ್ ಗಾತ್ರದ ಮೊಸಳೆಯನ್ನು ಅರಣ್ಯ ಇಲಾಖೆ ಕಚೇರಿಗೆ ಸಾಗಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವಿಡಿಯೋದಲ್ಲಿ, ಒಬ್ಬ ವ್ಯಕ್ತಿ ಸ್ಕೂಟರ್ ಸವಾರಿ ಮಾಡುತ್ತಿದ್ದರೆ, ಹಿಂಬದಿ ಸವಾರ ಮೊಸಳೆಯನ್ನು ಅಡ್ಡಲಾಗಿ ಹಿಡಿದು ಕುಳಿತಿದ್ದಾನೆ. ಮೊಸಳೆಯನ್ನು ಹಿಡಿದು ಸ್ಕೂಟರ್ ಮೂಲಕ ಸಾಹಸಮಯ ಸವಾರಿ ಮಾಡಿರುವ ಯುವಕರ ಕಾರ್ಯ ನಿಬ್ಬೆರಗಾಗುವಂತೆ ಮಾಡಿದ್ದು ಮೊಸಳೆಯನ್ನು ರಕ್ಷಿಸಿ ಅರಣ್ಯ ಇಲಾಖೆಗೆ ಕೊಂಡೊಯ್ದ ಬಗ್ಗೆ ಮೆಚ್ಚುಗೆಯೂ ವ್ಯಕ್ತವಾಗಿದೆ.