ಆಡಿಯೋ ವೈರಲ್ ಬಳಿಕ ಬೆದರಿಕೆ ಆರೋಪ ಹಿನ್ನೆಲೆ: ಎರಡನೇ ಬಾರಿಗೆ ಪೊಲೀಸ್ ಠಾಣೆ ಮೆಟ್ಟಿಲೇರಿದ ಮಹಿಳೆ
ಪುತ್ತೂರು: ಇತ್ತೀಚೆಗೆ ಅರುಣ್ ಕುಮಾರ್ ಪುತ್ತಿಲ ಜೊತೆ ಮಾತನಾಡಿರುವ ವೈರಲ್ ಆಗಿರುವ ಆಡಿಯೋದಲ್ಲಿ ಮಾತನಾಡಿರುವ ಮಹಿಳೆ ಎನ್ನಲಾದ ಮಹಿಳೆಯೋರ್ವರು ತನಗೆ ಬೆದರಿಕೆಯಿದ್ದು, ಪೊಲೀಸ್ ರಕ್ಷಣೆ ಕೋರಿ ಮತ್ತೊಮ್ಮೆ ಪುತ್ತೂರು ನಗರ ಪೊಲೀಸ್ ಠಾಣೆಗೆ ಬಂದು ಇನ್ಸ್‌ಪೆಕ್ಟರ್ ಜೊತೆ ಮಾತನಾಡಿದ್ದಾರೆ.

ಆ.31ರಂದು ಸಂಜೆ ವೇಳೆಗೆ ಮಹಿಳೆ ಪೊಲೀಸ್ ಠಾಣೆಗೆ ಬಂದು ಇನ್ಸ್‌ಪೆಕ್ಟರ್ ಜೊತೆ ಮಾತನಾಡಿ ತನಗೆ ಇನ್ನೂ ರಕ್ಷಣೆಯ ಅಗತ್ಯವಿದೆ ಎಂದು ಹೇಳಿದ್ದಾರೆ ಎಂದು ತಿಳಿದು ಬಂದಿದೆ. ಆದರೆ ಇನ್ನು ಕೂಡಾ ಯಾವುದೇ ಅಧಿಕೃತ ಲಿಖಿತ ದೂರು ಸಲ್ಲಿಸಿಲ್ಲ ಎಂದು ತಿಳಿದು ಬಂದಿದೆ.