ಹೆಚ್ಚುವರಿ ಚಾಲಕ-ನಿರ್ವಾಹಕರ ನೇಮಕಕ್ಕೆ ಸಾರಿಗೆ ಸಚಿವರಿಗೆ ಶಾಸಕ ಅಶೋಕ್ ರೈ ಮನವಿ
ಪುತ್ತೂರು: ಪುತ್ತೂರುಕೆಎಸ್ ಆರ್ ಟಿ ಸಿ ಡಿಪೋದಲ್ಲಿ ಚಾಲಕ/ ನಿರ್ವಾಹಕರ ಕೊರತೆ ಇದ್ದು ಸರಕಾರ ಹೆಚ್ಚುವರಿಯಾಗಿ ಚಾಲಕ/ ನಿರ್ವಾಹಕರನ್ನು ನೇಮಕ ಮಾಡುವಂತೆ ಸಾರಿಗೆ ಹಾಗೂಮುಜರಾಯಿ ಖಾತೆ ಸಚಿವರಾದ ರಾಮಲಿಂಗಾ ರೆಡ್ಡಿಯವರಿಗೆ ಶಾಸಕ ಅಶೋಕ್ ರೈ ಯವರು ಮನವಿ ಸಲ್ಲಿಸಿದ್ದಾರೆ.
ಗುರುವಾರ ಬೆಂಗಳೂರಿನಲ್ಲಿ ಸಚಿವರನ್ನು ಭೇಟಿಯಾದ ಶಾಸಕರು ಪುತ್ತೂರು ತಾಲೂಕಿನ ಗ್ರಾಮಾಂತರ ಭಾಗದಲ್ಲಿ ಬಸ್ ಸಂಚಾರ ಹೆಚ್ಚುವರಿಯಾಗಿ ವ್ಯವಸ್ಥೆ ಮಾಡುವಲ್ಲಿ ಚಾಲಕ/ ನಿರ್ವಾಹಕರ ಕೊರತೆ ಇದೆ. ಬಸ್ ಇದ್ದರೂ ಚಾಲಕರ ಕೊರತೆಯಿಂದ ಗ್ರಾಮೀಣ ಭಾಗಕ್ಕೆ ಬಸ್ ಓಡಾಟ ನಡೆಸಲು ಅಸಾಧ್ಯವಾಗಿದೆ. ಸಾರ್ವಜನಿಕರ ಹಿತ ದೃಷ್ಟಿಯಿಂದ ಹೆಚ್ಚುವರಿಯಾಗಿ ಚಾಲಕ/ ನಿರ್ವಾಹಕರನ್ನು ನೇಮಿಸುವಂತೆ ಸಚಿವರಲ್ಲಿಮನವಿ ಸಲ್ಲಿಸಿದ್ದಾರೆ.
ಅಂತರರಾಜ್ಯ ಬಸ್ ಸಂಚಾರಕ್ಕೆ ಮನವಿ
ಕಾಸರಗೋಡು ಜಿಲ್ಲೆಯ ಕಾಟುಕುಕ್ಕೆಗೆ ಪುತ್ತೂರಿನಿಂದ ಕೆಎಸ್ಆರ್ಟಿಸಿ ಬಸ್ ಸಂಚಾರ ಆರಂಭ ಮಾಡಲು ಇಲಾಖೆಯಿಂದ ಅನುಮತಿನೀಡುವಂತೆಯೂ ಸಚಿವರಲ್ಲಿಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ನಗರ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದಾಲಿ, ಗ್ಯಾರಂಟಿ ಸಮಿತಿ ಪುತ್ತೂರು ತಾಲೂಕು ಅಧ್ಯಕ್ಷ ಉಮಾನಾಥ ಶೆಟ್ಟಿ, ಪಕ್ಷದ ಮುಖಂಡರಾದ ಮುರಳೀಧರ್ ರೈ ಮಟಂತಬೆಟ್ಟು, ರೋಶನ್ ರೈ ಬನ್ನೂರು, ಪ್ರಮೋದ್ ಕೆ ಎಸ್ ಕೊಳ್ತಿಗೆ ಉಪಸ್ಥಿತರಿದ್ದರು.