ಪ್ರೀತಿಗೆ ಪೋಷಕರ ವಿರೋಧ: ನೇಣಿಗೆ ಶರಣಾದ ಪ್ರೇಮಿಗಳು
ಪ್ರೀತಿಗೆ ಪೋಷಕರು ವಿರೋಧ ವ್ಯಕ್ತಪಡಿಸಿದ್ದರಿಂದ ನೊಂದ ಪ್ರೇಮಿಗಳು ಒಬ್ಬರಿಗೊಬ್ಬರು ತಬ್ಬಿಗೊಂಡು ಮನೆಯ ಫ್ಯಾನಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ದಾರುಣ ಘಟನೆ ತಮಿಳುನಾಡಿನ ಡೆಂಕಣಿಕೋಟೆಯ ಕೆಳಮಂಗಲ ಸಮೀಪದ ಗೌತಾಲಂ ಗ್ರಾಮದಲ್ಲಿ ನಡೆದಿದೆ. ಗೌತಾಲಂ ಗ್ರಾಮದ ನರಸಿಂಹಮೂರ್ತಿ (22), ಬಾಚನಪ್ಪಟ್ಟಿ ಗ್ರಾಮದ ಯುವಶ್ರೀ (17) ಆತ್ಮಹತ್ಯೆ ಮಾಡಿಕೊಂಡ ಪ್ರೇಮಿಗಳು.
ನರಸಿಂಹಮೂರ್ತಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದನು. ಯುವಶ್ರೀ ಕೃಷ್ಣಗಿರಿಯ ಸರ್ಕಾರಿ ಕಾಲೇಜಿನಲ್ಲಿ ಪ್ರಥಮ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದಳು. ನರಸಿಂಹ ಮೂರ್ತಿ ಹಾಗೂ ಯುವಶ್ರೀ ಕೆಲ ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಇವರ ಪ್ರೀತಿಗೆ ಯುವಶ್ರೀ ಪೋಷಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು ಎನ್ನಲಾಗಿದೆ.
ನರಸಿಂಹಮೂರ್ತಿ ಯುವಶ್ರೀಗೆ ಕಿರುಕುಳ ನೀಡುತ್ತಿದ್ದಾನೆಂದು ಯುವಶ್ರೀ ಪೋಷಕರು ಕಳೆದ ತಿಂಗಳು ಡೆಂಕಣಿಕೋಟೆ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಪೊಲೀಸರು ಪೋಕ್ಸೋ ಕಾಯ್ದೆಯಡಿ ನರಸಿಂಹಮೂರ್ತಿಯನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದರು. 10 ದಿನಗಳ ಹಿಂದೆಯಷ್ಟೇ ಜಾಮೀನಿನ ಮೇಲೆ ನರಸಿಂಹಮೂರ್ತಿ ಜೈಲಿನಿಂದ ಹೊರಬಂದಿದ್ದನು.
ನರಸಿಂಹಮೂರ್ತಿ ಜೈಲಿನಿಂದ ಹೊರಬಂದ ಬಳಿಕ ಯುವಶ್ರಿ ಜೊತೆ ಜೊತೆ ನಿರಂತರ ಫೋನ್ನಲ್ಲಿ ಸಂಪರ್ಕ ಇದ್ದನು. ಯುವಶ್ರೀ ಶುಕ್ರವಾರ ಸಂಜೆ ಕಾಲೇಜು ಮುಗಿಸಿ ನರಸಿಂಹಮೂರ್ತಿ ಮನೆಗೆ ಹೋಗಿದ್ದಾಳೆ. ಪ್ರೀತಿಗೆ ಪೋಷಕರು ವಿರೋಧ ಮಾಡುತ್ತಿರುವುದರಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದ್ದಾರೆ. ಮನೆಯ ಬಾಗಿಲು ಹಾಕಿಕೊಂಡು ಒಬ್ಬರಿಗೊಬ್ಬರು ತಬ್ಬಿಕೊಂಡು ಇಬ್ಬರು ಪ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಡೆಂಕಣಿಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.