ಪುತ್ತೂರು ತಾ| ಶಿಕ್ಷಣ ಸಂಪನ್ಮೂಲ ಕೇಂದ್ರದಿಂದ “ನಾವು ಮನುಜರು” ಕಾರ್ಯಕ್ರಮ
ಪುತ್ತೂರು: 78ನೇ ಸ್ವಾತಂತ್ರೋತ್ಸವದ ಅಂಗವಾಗಿ ತಾ12-08-2024 ಪುತ್ತೂರು ಸಾಮೆತ್ತಡ್ಕ ಹಿರಿಯ ಪ್ರಾ ಶಾಲೆಯಲ್ಲಿ ಪುತ್ತೂರು ತಾಲೂಕು ಶಿಕ್ಷಣ ಸಂಪನ್ಮೂಲ ಕೇಂದ್ರದಿಂದ ಮಕ್ಕಳಿಗೆ ರಸಪ್ರಶ್ನೆ ಹಮ್ಮಿಕೊಳ್ಳಲಾಯಿತು ಮತ್ತು ವಿದ್ಯಾರ್ಥಿಗಳಲ್ಲಿ ಮಾನವೀಯತೆಯನ್ನು ಬೆಳೆಸುವ ನಿಟ್ಥಿನಲ್ಲಿ “ನಾವು ಮನುಜರು” ಎಂಬ ಕಾರ್ಯಕ್ರಮ ಆ.12ರಂದು ನಡೆಯಿತು.
ಶಿಕ್ಷಣ ಸಂಪನ್ಮೂಲದ ಅಧ್ಯಕ್ಷ ರಫೀಕ್ ದರ್ಬೆಯವರು ಮಕ್ಕಳಿಗೆ ವಿದ್ಯಾರ್ಥಿ ದೆಸೆಯಿಂದಲೇ ಹೆತ್ತವರಲ್ಲಿ, ಶಿಕ್ಷಕರಲ್ಲಿ ಗೌರವದ ಬಗ್ಗೆ ದಿನನಿತ್ಯ ಚಟುವಟಿಕೆಯಲ್ಲಿ ಶ್ರದ್ಧೆ ತುಂಬಿದ ಜೀವನದೊಂದಿಗೆ ಮಾನವೀಯತೆಯ ಬೆಳವಣಿಗೆಯ ಬಗ್ಗೆ ವಿವರಿಸಿ ವಿದ್ಯಾರ್ಥಿಗಳಲ್ಲಿ ಹುರುಪು ತುಂಬಿದರು.
ಘಟಕದ ಕಾರ್ಯದರ್ಶಿ ಸುಮಂಗಲಾ ಶೆಣೈ ಸಂಪನ್ಮೂಲ ವ್ಯಕ್ತಿಯಾಗಿದ್ದು ಮಕ್ಕಳ ಹಾವಭಾವದ ವ್ಯತ್ಯಾಸದಲ್ಲಿ ಜಾಗರೂಕರಾಗಿರಬೇಕಾದ ಹಾಡೊಂದನ್ನ ಹಾಡಿದರು. ಶಿಕ್ಷಣ ಒಕ್ಕೂಟದ ಅಧ್ಯಕ್ಷೆ ನಯನ ರೈ ಮಾತನಾಡಿ ಸಾರ್ವಜನಿಕ ಸ್ಥಳಗಳಲ್ಲಿ ಅಪರಿಚಿತ ವ್ಯಕ್ತಿಗಳು ಚಾಕಲೇಟ್ ನೀಡಿದಾಗ ನಮ್ಮ ನಿಲುವಿನ ಬಗ್ಗೆ ಮಕ್ಕಳಿಗೆ ಅಗತ್ಯ ಮಾಹಿತಿ ನೀಡಿದರು,
ಪ್ರಮಿತಾರವರು ಮಕ್ಕಳಲ್ಲಿ ಹಿರಿಯರ ಸೇವೆ ಮತ್ತು ಸಹಕಾರದ ಬಗ್ಗೆ ವಿದ್ಯಾರ್ಥಿಗಳಲ್ಲಿ ಕುಟುಂಬ ಬಾಂಧವ್ಯವನ್ನು ಮೂಡಿಸಿದರು, ಘಟಕದ ಉಪಾದ್ಯಕ್ಷರಾದ ರೋಹಿಣಿ ರಾಘವರವರು ವಿದ್ಯಾರ್ಥಿಗಳಿಗೆ ಹಾಡೊಂದರ ಮೂಲಕ ಮಾನವೀಯತೆಯ ವಿಶೇಷ ಛಾಪು ನೀಡಿದರು
ಸ್ವಾತಂತ್ರೋತ್ಸವದ ಬಗ್ಗೆ ರಸಪ್ರಶ್ನೆಗಳಿಗೆ ಉತ್ತರಿಸಿದ ವಿದ್ಯಾರ್ಥಿಗಳಿಗೆ ಶಿಕ್ಷಣ ಸಂಪನ್ಮೂಲ ಕೇಂದ್ರದಿಂದ ಬಹುಮಾನ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಶಿವಪ್ರಸಾದ್, ಶಾಲಾ ಮುಖ್ಯೊಪಾದ್ಯಾಯರಾದ ಮರಿಯ ಅಶ್ರಫ್,
ದಿನೇಶ ಕಾಮತ್, ಫಾಯಿಜ್,ಇಂದಿವರ್ ಭಟ್ ಹಾಗೂ ಶಿಕ್ಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.