ಮಾಣಿ: ಯುವಕ ಆತ್ಮಹತ್ಯೆ
ಮಾಣಿ: ಯುವಕನೋರ್ವ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಾಣಿ ಸಮೀಪದ ಪಟ್ಲಕೋಡಿಯಲ್ಲಿ ನಡೆದಿದೆ. ಮಾಣಿ ಪಟ್ಲಕೋಡಿ ನಿವಾಸಿ, ತಿಲಕ್ ಪೂಜಾರಿ (34ವ) ಮೃತ ಯುವಕ.
ತಿಲಕ್ ಪೂಜಾರಿ ಅವಿವಾಹಿತರಾಗಿದ್ದು, ಚಾಲಕ ವೃತ್ತಿ ನಿರ್ವಹಿಸುತ್ತಿದ್ದರು ಎನ್ನಲಾಗಿದೆ. ಮನೆಯಲ್ಲಿಯೇ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಮೃತರು ತಂದೆ, ತಾಯಿ, ಸಹೋದರ, ಸಹೋದರಿಯನ್ನು ಅಗಲಿದ್ದಾರೆ.