ಕರಾವಳಿಕ್ರೈಂ

ಬಂಟ್ವಾಳ: ಮಾದಕ ವಸ್ತು ಸೇವಿಸಿ ನಶೆಯಲ್ಲಿದ್ದ ಮೂವರು ಪೊಲೀಸ್ ವಶಕ್ಕೆ, ಪ್ರಕರಣ ದಾಖಲು





ಬಂಟ್ವಾಳ ತಾಲೂಕು ಮಂಚಿ ಗ್ರಾಮದ ಕುಕ್ಕಾಜೆ ಎಂಬಲ್ಲಿ, ಸಾರ್ವಜನಿಕ ಸ್ಥಳದಲ್ಲಿ ಮೂವರು ಯುವಕರು ಮಾದಕ ವಸ್ತು ಸೇವನೆ ಮಾಡಿ ನಶೆಯಲ್ಲಿ ಅಸಭ್ಯವಾಗಿ ವರ್ತಿಸುತ್ತಾ ಸಾರ್ವಜನಿಕರಿಗೆ ತೊಂದರೆ ನೀಡುತ್ತಿರುವುದಾಗಿ ಮಾಹಿತಿ ಬಂದ ಮೇರೆಗೆ ಸದ್ರಿ ಸ್ಥಳಕ್ಕೆಜು.23ರಂದು 112 ಸಹಾಯವಾಣಿಯ ಪೊಲೀಸರು ತೆರಳಿ, ಪರಿಶೀಲಿಸಿದಾಗ, ಮೂವರು ಮಾದಕವಸ್ತು ಸೇವನೆ ಮಾಡಿರುವಂತೆ ಕಂಡು ಬಂದ ಹಿನ್ನೆಲೆಯಲ್ಲಿ ಅವರನ್ನು ಹೆಚ್ಚಿನ ವಿಚಾರಣೆಗಾಗಿ ಠಾಣೆಗೆ ಕರೆ ತರಲಾಗಿತ್ತು.

ಆರೋಪಿಗಳನ್ನು ಸಜಿಪಮುನ್ನೂರು ಗ್ರಾಮದ ನಂದಾವರಕೋಟೆಯ ಮಹಮ್ಮದ್‌ ರಾಫಿದ್‌(19)
ಮೂಡಗ್ರಾಮದ ಮಹಮ್ಮದ್‌ ಇರ್ಷಾದ್‌(23) ಹಾಗೂ  ಮಂಚಿ ಗ್ರಾಮದ ದಾವುದುಲ್‌ ಅಮೀರ್‌(26) ಎಂದು ಗುರುತಿಸಲಾಗಿದ್ದು ಅವರನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಿದಾಗ ನಿಷೇದಿತ ಮಾದಕ ವಸ್ತು ಸೇವನೆ ಮಾಡಿರುವುದು ದೃಢಪಟ್ಟಿದೆ. ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!