ಜಾವಗಲ್‌ಗೆ ಬಸ್ ವ್ಯವಸ್ಥೆ ಕಲ್ಪಿಸಲು ಶಕೂರ್ ಹಾಜಿಯಿಂದ ಶಾಸಕರಿಗೆ ಮನವಿ
ಪುತ್ತೂರು: ಪುತ್ತೂರಿನಿಂದ ಜಾವಗಲ್‌ಗೆ ಕೆಎಸ್‌ಆರ್‌ಟಿಸಿ ಬಸ್ ವ್ಯವಸ್ಥೆ ಕಲ್ಪಿಸುವಂತೆ ಪುತ್ತೂರು ಬ್ಲಾಕ್ ಅಲ್ಪ ಸಂಖ್ಯಾತ ಘಟಕದ ಅಧ್ಯಕ್ಷರಾದ ಶಕೂರ್ ಹಾಜಿಯವರು ಶಾಸಕರಾದ ಅಶೋಕ್ ರೈಯವರಿಗೆ ಮನವಿ ಸಲ್ಲಿಸಿದ್ದಾರೆ.

ಹಲವು ವರ್ಷಗಳ ಹಿಂದೆ ಪುತ್ತೂರಿನಿಂದ ಜಾವಗಲ್‌ಗೆ ಬಸ್ ವ್ಯವಸ್ಥೆ ಇತ್ತು. ಅದನ್ನು ನಿಲ್ಲಿಸಲಾಗಿತ್ತು. ಆ ಬಳಿಕ ಇಲ್ಲಿಗೆ ಬಸ್ ಪುನರಾರಂಭಮಾಡಿಲ್ಲ. ಪುತ್ತೂರಿನಿಂದ ಸಾವಿರಾರು ಮಂದಿ ಜಾವಗಲ್‌ಗೆ ತೆರಳುವ ಭಕ್ತರಿದ್ದು ಬಸ್ ವ್ಯವಸ್ಥೆ ಮಾಡಿದಲ್ಲಿ ಅನುಕೂಲವಾಗಲಿದೆ. ಪುತ್ತೂರಿನಿಂದ ಉಪ್ಪಿನಂಗಡಿ-ಉಜಿರೆ-ಬೆಳ್ತಂಗಡಿ-ಚಾರ್ಮಾಡಿ- ಮೂಡಿಗೆರೆ -ಬೇಳೂರು ಮಾರ್ಗವಾಗಿ ಜಾವಗಲ್‌ಗೆ ಪ್ರತಿದಿನ ಬಸ್ ವ್ಯವಸ್ಥೆ ಮಾಡಬೇಕು ಎಂದು ಮನವಿಯಲ್ಲಿ ವಿನಂತಿಸಿದ್ದಾರೆ