ಕರಾವಳಿ

ಕೂರತ್ ತಂಙಳ್ ಅಂತಿಮ ದರ್ಶನಕ್ಕೆ ಜನ ಸಾಗರ

ಪುತ್ತೂರು: ಸಯ್ಯದ್ ಫಝಲ್ ಕೋಯಮ್ಮ ತಂಙಳ್ ಕೂರತ್ ಅವರ ಅಂತಿಮ ದರ್ಶನಕ್ಕೆ ವಿವಿಧ ಭಾಗಗಳಿಂದ ಸಾವಿರಾರು ಜನರು ಭಾಗವಹಿಸಿದ್ದರು. ಮೃತದೇಹ ಕೂರತ್ ಮಸೀದಿ ವಠಾರದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು.

ಸಾವಿರಾರು ಸಂಖ್ಯೆಯಲ್ಲಿ ಜನರು ಸೇರಿದ್ದರಿಂದ ಜನರನ್ನು ನಿಯಂತ್ರಿಸಲು ಸ್ವಯಂ ಸೇವಕರು ಹರ ಸಾಹಸ ಪಡುತ್ತಿದ್ದ ದೃಶ್ಯ ಕಂಡು ಬಂತು.

ಮಸೀದಿ ವಠಾರದಲ್ಲಿ ಜನರು ಭರ್ತಿ ಆಗಿ ರಸ್ತೆಯಲ್ಲಿ ಸಾವಿರಾರು ಮಂದಿ ನಿಂತುಕೊಂದಿದ್ದರು. ಹಲವಾರು ಮಂದಿ ಕಣ್ಣೀರು ಸುರಿಸುತ್ತಿದ್ದ ದೃಶ್ಯ ಕಂಡು ಬಂತು. ಕೆಲವು ಹೊತ್ತು ಮೃತದೇಹವನ್ನು ಅಂತಿಮ ದರ್ಶನಕ್ಕೆ ಇಡಲಾಗಿತ್ತು. ಸ್ಪೀಕರ್ ಯುಟಿ ಖಾದರ್, ಶಾಸಕ ಅಶೋಕ್ ರೈ ಕೂಡಾ ಸ್ಥಳದಲ್ಲಿದ್ದರು. ಸೇರಿದ್ದ ಬಹುತೇಕರಿಗೆ ಮೃತದೇಹ ನೋಡಲು ಸಾಧ್ಯವಾಗಿಲ್ಲ. ಬಳಿಕ ಸಮೀಪದ ಕುದ್ಮಾರು ಎಂಬಲ್ಲಿರುವ ಕೂರತ್ ತಂಙಳ್ ಅವರಿಗೆ ಸೇರಿದ ಜಾಗದಲ್ಲಿ ದಫನ ಮಾಡಲಾಯಿತು.

Leave a Reply

Your email address will not be published. Required fields are marked *

error: Content is protected !!