ಕೂರತ್ ತಂಙಳ್ ಅಗಲುವಿಕೆ ಸಮುದಾಯಕ್ಕೂ, ಸಮಾಜಕ್ಕೂ ತುಂಬಲಾರದ ನಷ್ಟ: ಅಬ್ದುಲ್ ರಹಿಮಾನ್ ಹಾಜಿ ಅರಿಯಡ್ಕ
ಉಳ್ಳಾಲ ಖಾಝಿ ಸಯ್ಯದ್ ಫಝಲ್ ಕೋಯಮ್ಮ ತಂಙಳ್ ಕೂರತ್ ನಿಧನಕ್ಕೆ ಕುಂಬ್ರ ಮರ್ಕಝುಲ್ ಹುದಾ ಮಹಿಳಾ ಕಾಲೇಜಿನ ಅಧ್ಯಕ್ಷ ಅಬ್ದುಲ್ ರಹಿಮಾನ್ ಹಾಜಿ ಅರಿಯಡ್ಕ ಸಂತಾಪ ವ್ಯಕ್ತಪಡಿಸಿದ್ದಾರೆ.
ಕುಂಬ್ರ ಮರ್ಕಝುಲ್ ಹುದಾದ ನಿರ್ದೇಶಕರಾಗಿ ಕೂರತ್ ತಂಙಳ್ ಅವರು ಕಾರ್ಯ ನಿರ್ವಹಿಸುತ್ತಿದ್ದು ತಂಙಳ್ ಅವರ ಅಗಲುವಿಕೆ ಸಮುದಾಯಕ್ಕೂ, ಸಮಾಜಕ್ಕೂ ತುಂಬಲಾರದ ನಷ್ಟವಾಗಿದೆ ಎಂದು ಅಬ್ದುಲ್ ರಹಿಮಾನ್ ಹಾಜಿ ಅರಿಯಡ್ಕ ಸಂತಾಪ ಸೂಚಿಸಿದ್ದಾರೆ.