ಬ್ಯಾನ್ ಆಗುತ್ತಾ ಶವರ್ಮಾ..!?
ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ನಡೆಸಿದ ಟೆಸ್ಟ್ನಲ್ಲಿ ಗೋಬಿ ಮಂಚೂರಿ, ಕಬಾಬ್, ಪಾನಿಪುರಿ ಆರೋಗ್ಯಕ್ಕೆ ಮಾರಕವಾದ ಅಂಶಗಳು ಪತ್ತೆಯಾದ ಬೆನ್ನಿಗೇ ಅದೇ ಸಾಲಿಗೆ ಶವರ್ಮ ಕೂಡಾ ಸೇರಿಕೊಂಡಿದೆ.

ಆರೋಗ್ಯದ ದೃಷ್ಟಿಯಿಂದ ಶವರ್ಮಾ ನಿಷೇಧಿಸಲು ಚಿಂತನೆ ನಡೆದಿದೆ. ಆಹಾರ ಗುಣಮಟ್ಟ ಇಲಾಖೆಯು ರಾಜ್ಯದ ವಿವಿಧೆಡೆಯಿಂದ ಶವರ್ಮಾ ಮಾದರಿ ಪರೀಕ್ಷೆ ನಡೆಸಿದ್ದು ಪರೀಕ್ಷಾ ಮಾದರಿಯಲ್ಲಿ ಬ್ಯಾಕ್ಟೀರಿಯಾ ಈಸ್ಟ್ ಪತ್ತೆಯಾಗಿದೆ. ಸರಿಯಾದ ರೀತಿಯಲ್ಲಿ ಆಹಾರ ತಯಾರಿಸದ ಕಾರಣ ಬಾಕ್ಟೀರಿಯಾಗಳು ಪತ್ತೆಯಾಗಿವೆ. ಈಗಾಗಲೇ ಅಸುರಕ್ಷಿತ ಶವರ್ಮಾ ನೀಡಿರುವ ಅಂಗಡಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ.
ಶವರ್ಮಾ ತಯಾರಿಕೆ ವೇಳೆ ಶುಚಿತ್ವ ಕಾಪಾಡುವಂತೆ ಸೂಚನೆ ನೀಡಲಾಗಿದ್ದು ಶುಚಿತ್ವ ನಿರ್ವಹಣೆ, ನೋಂದಣಿ ಮಾಡಿಸದಿದ್ರೆ ಕ್ರಮದ ಎಚ್ಚರಿಕೆ ನೀಡಲಾಗಿದೆ.