ಅಂತಾರಾಷ್ಟ್ರೀಯಕ್ರೀಡೆರಾಷ್ಟ್ರೀಯ

ಟಿ20 ವಿಶ್ವಕಪ್ ಗೆದ್ದ ಟೀಂ ಇಂಡಿಯಾಗೆ ಸಿಕ್ಕಿದ ಬಹುಮಾನದ ಮೊತ್ತವೆಷ್ಟು ಗೊತ್ತೇ..?

ದಕ್ಷಿಣ ಆಫ್ರಿಕಾ ತಂಡವನ್ನು ಮಣಿಸಿದ ಟೀಂ ಇಂಡಿಯಾ 17 ವರ್ಷಗಳ ನಂತರ ಟಿ20 ವಿಶ್ವಕಪ್ ಟ್ರೋಫಿ ಗೆದ್ದಿದೆ. ಇದೀಗ ಈ ಟ್ರೋಫಿಯೊಂದಿಗೆ ಟೀಂ ಇಂಡಿಯಾ ಐಸಿಸಿಯಿಂದ 2.45 ಮಿಲಿಯನ್ ಡಾಲರ್ ಅಂದರೆ ಸುಮಾರು 20.42 ಕೋಟಿ ಬಹುಮಾನ ಪಡೆದಿದೆ. ಅಲ್ಲದೇ ಭಾರತ ತಂಡ ಪ್ರತಿ ಗೆಲುವಿಗೆ ಪ್ರತ್ಯೇಕವಾಗಿ ಅಂದಾಜು 26 ಲಕ್ಷ ರೂ. ಪಡೆದಿದೆ. ಒಟ್ಟಾಗಿ ಭಾರತ ತಂಡ ಈ ಟೂರ್ನಿಯಿಂದ 22.76 ಕೋಟಿ ರೂ. ಗಳಿಸಿದೆ.

ರನ್ನರ್ ಅಪ್ ಆದ ದಕ್ಷಿಣ ಆಫ್ರಿಕಾ ತಂಡ 1.28 ಮಿಲಿಯನ್ ಡಾಲರ್ ಅಂದರೆ ಸುಮಾರು 10.67 ಕೋಟಿ ರೂ. ಪಡೆದಿದೆ. ಇದಲ್ಲದೇ 8 ಪಂದ್ಯ ಗೆದ್ದು ಸುಮಾರು 2.07 ಕೋಟಿ ರೂ. ಸಂಪಾದಿಸಿದ್ದು, ಈ ಟೂರ್ನಿಯಿಂದ ದಕ್ಷಿಣ ಆಫ್ರಿಕಾ ಒಟ್ಟು 12.7 ಕೋಟಿ ರೂ. ಬಹುಮಾನ ಪಡೆದಿದೆ.

Leave a Reply

Your email address will not be published. Required fields are marked *

error: Content is protected !!