ಪುತ್ತೂರು: ರೆಫ್ರಿಜರೇಟರ್ ಸ್ಪೋಟ
ಪುತ್ತೂರು: ರೆಫ್ರಿಜರೇಟರ್ ಸ್ಪೋಟಗೊಂಡು ಮನೆಯಲ್ಲಿದ್ದ ಇತರ ವಿದ್ಯುತ್ ಉಪಕರಣಗಳು ಬೆಂಕಿಗಾಹುತಿಯಾದ ಘಟನೆ ಚಿಕ್ಕಮುಡ್ನೂರು ಗ್ರಾಮದ ಜಿಡೆಕಲ್ಲಿನಲ್ಲಿ ಜೂ.18ರಂದು ಬೆಳಿಗ್ಗೆ ನಡೆದಿದೆ.
ಜಿಡೆಕಲ್ಲು ಸರಕಾರಿ ಕಾಲೇಜು ಸಮೀಪ ಮೋನಪ್ಪ ಎಂಬವರ ಮನೆಯಲ್ಲಿ ಫ್ರಿಡ್ಜ್‌ಸ್ಫೋಟಗೊಂಡು ಅಗ್ನಿ ಅವಘಡ ಸಂಭವಿಸಿದೆ. ಸ್ಫೋಟದ ವೇಳೆ ಮನೆಯಲ್ಲಿ ಯಾರು ಇಲ್ಲದಿದ್ದ ಕಾರಣ ಪ್ರಾಣಾಪಾಯ ಸಂಭವಿಸಿಲ್ಲ. ಘಟನೆಯಿಂದಾಗಿ ಫ್ರಿಡ್ಜ್ ಸಂಪೂರ್ಣ ಸುಟ್ಟು ಕರಕಲಾಗಿದ್ದು, ಮನೆಯಲ್ಲಿದ್ದ ವಿದ್ಯುತ್ ಪರಿಕರಗಳು ಸೇರಿದಂತೆ ಇತರ ಸೊತ್ತುಗಳು ಹಾನಿಗೊಂಡಿದೆ. ಮನೆಗೆ ಅಪಾರ ಪ್ರಮಾಣದ ಹಾನಿಯುಂಟಾಗಿದೆ.