ಕುಂಬ್ರ ಮರ್ಕಝುಲ್ ಹುದಾದ ಟಾಪರ್ ವಿದ್ಯಾರ್ಥಿನಿಯರಿಗೆ ಮೀಫ್ ವತಿಯಿಂದ ‘ಎಕ್ಸಲೆನ್ಸ್ ಅವಾರ್ಡ್’
ಪುತ್ತೂರು: 2023-24ನೇ ಸಾಲಿನ ಶೈಕ್ಷಣಿಕ ವರ್ಷದ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಟಾಪರ್ ಆಗಿರುವ ಕುಂಬ್ರ ಮರ್ಕಝುಲ್ ಹುದಾ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿಯರಾದ ಆಯಿಷತ್ ಸಫಾನಾ ಸರ್ವೆ ಹಾಗೂ ಫಾತಿಮತ್ ಸಹ್ಲಾ ಬೆಳ್ಳಾರೆ ಅವರನ್ನು ಮುಸ್ಲಿಂ ಎಜುಕೇಶನ್ ಇನ್ಸ್ಟಿಟ್ಯೂಟ್ ಫೆಡರೇಶನ್ ವತಿಯಿಂದ ‘ಎಕ್ಸಲೆನ್ಸ್ ಅವಾರ್ಡ್’ ನೀಡಿ ಪುರಸ್ಕರಿಸಲಾಯಿತು.
ಇವರನ್ನು ಮಂಗಳೂರಿನ ಜಪ್ಪಿನಪದವು ಪ್ರಸ್ಟೇಜ್ ಇಂಟರ್ನ್ಯಾಷನಲ್ ಸ್ಕೂಲ್ ಸಭಾಂಗಣದಲ್ಲಿ ನಡೆದ ಮೀಫ್ ಎಕ್ಸಲೆನ್ಸ್ ಅವಾರ್ಡ್-24 ಕಾರ್ಯಕ್ರಮದಲ್ಲಿ ನಗದು ಬಹುಮಾನ ಮತ್ತು ನೆನಪಿನ ಕಾಣಿಕೆಗಳನ್ನು ನೀಡಿ ಗೌರವಿಸಲಾಯಿತು.
ಕುಂಬ್ರ ಮರ್ಕಝುಲ್ ಹುದಾ ಮಹಿಳಾ ಪದವಿಪೂರ್ವ ಕಾಲೇಜಿನ ಕಲಾ ವಿಭಾಗದ ವಿದ್ಯಾರ್ಥಿನಿ ಆಯಿಷತ್ ಸಫಾನ ಸರ್ವೆ ಪ್ರಥಮ ಸ್ಥಾನವನ್ನು ಗಳಿಸುವ ಮೂಲಕ ದ.ಕ, ಉಡುಪಿ ಜಿಲ್ಲೆಗಳ ಮುಸ್ಲಿಂ ಮ್ಯಾನೇಜ್ಮೆಂಟ್ ಕಾಲೇಜುಗಳಲ್ಲಿ 2023-24 ನೇ ಸಾಲಿನ ಕಲಾ ವಿಭಾಗದಲ್ಲಿ ಪ್ರಥಮ ಸ್ಥಾನಿಯಾಗಿ ಪುರಸ್ಕೃತರಾದರು.
ದ್ವಿತೀಯ ಸ್ಥಾನದಲ್ಲಿ ಮರ್ಕಝುಲ್ ಹುದಾ ಮಹಿಳಾ ಪದವಿಪೂರ್ವ ಕಾಲೇಜಿನ ಕಲಾ ವಿಭಾಗದ ಫಾತಿಮತ್ ಸಹ್ಲಾ ನೆಲ್ಯಮಜಲು ಬೆಳ್ಳಾರೆ ಆಯ್ಕೆಯಾಗಿದ್ದರು.
ಅಗ್ರ 95 ಶೇಕಡಾ ಗಳಿಸಿದ ಮರ್ಕಝುಲ್ ಹುದಾ ವಿಜ್ಞಾನ ವಿಭಾಗದ ಫಾತಿಮ ಸುಹಾ ಪಡೀಲು, ಆಯಿಷಾ ತಸ್ಕಿಯಾ ಬಾರ್ಕೂರು ಉಡುಪಿ, ವಾಣಿಜ್ಯ ವಿಭಾಗದ ಆಯಿಷತ್ ಮುನೀಬ ಬಲ್ನಾಡ್ ಇವರನ್ನೂ ಈ ವೇಳೆ ಗೌರವಿಸಲಾಯಿತು.
ಕರ್ನಾಟಕ ರಾಜ್ಯ ವಿಧಾನ ಸಭಾ ಸ್ಪೀಕರ್ ಯು.ಟಿ ಖಾದರ್, ಸರಕಾರದ ಎ.ಸಿ.ಎಸ್ ಚೀಫ್ ಸೆಕ್ರಟರಿ ಎಲ್ ಕೆ ಆತಿಕ್, ಮೀಫ್ ಪ್ರಮುಖರಾದ ಮೂಸಬ್ಬ, ಸಯ್ಯಿದ್ ಬ್ಯಾರಿ, ಉಮರ್ ಟೀಕೆ, ರಶೀದ್ ಹಾಜಿ, ಮುಸ್ತಫಾ ಸುಳ್ಯ ಮುಂತಾದವರು ಉಪಸ್ಥಿತರಿದ್ದರು.
ಮರ್ಕಝುಲ್ ಹುದಾ ಕರ್ನಾಟಕ ಇದರ ಚೇರ್‌ಮೆನ್ ಅರಿಯಡ್ಕ ಅಬ್ದುರ್ರಹ್ಮಾನ್ ಹಾಜಿ, ಪ್ರಧಾನ ಕಾರ್ಯದರ್ಶಿ ಬಶೀರ್ ಇಂದ್ರಾಜೆ, ಗಲ್ಫ್ ಆರ್ಗನೈಸರ್ ಶಂಸುದ್ದೀನ್ ಬೈರಿಕಟ್ಟೆ, ಆಡಿಟರ್ ಅನ್ವರ್ ಹುಸೇನ್ ಗೂಡಿನಬಳಿ, ಹಮೀದ್ ಸುಳ್ಯ, ಪದವಿಪೂರ್ವ ವಿಭಾಗದ ಉಪನ್ಯಾಸಕಿಯರಾದ ಪ್ರತಿಭಾ ರೈ, ಸೌಮ್ಯ, ಜೋಸ್ನ, ಉಪಸ್ಥಿತರಿದ್ದರು.