ಜಿಲ್ಲೆಯ ವಕ್ಫ್ ಸಂಸ್ಥೆಗಳು ಮಾದರಿ ನಿಯಮಾವಳಿ ಅನುಷ್ಠಾನಕ್ಕೆ ದ.ಕ ಜಿಲ್ಲಾ ವಕ್ಫ್ ಅಧಿಕಾರಿಯಿಂದ ಸೂಚನೆ
ಕರ್ನಾಟಕ ರಾಜ್ಯ ವಖ್ಫ್ ಮಂಡಳಿಯಲ್ಲಿ ನೊಂದಾವಣಿಯಾದ ದ.ಕ ಜಿಲ್ಲೆಯ ಎಲ್ಲಾ ವಕ್ಫ್ ಸಂಸ್ಥೆಗಳು ಬೈಲಾ ಫಾರಂ ನಿಯಮ ನಿಗದಿತ ನಮೂನೆ ಸಂಖ್ಯೆ 42ರ ಅರ್ಜಿ ಫಾರಂ ಸಂಬಂಧಪಟ್ಟ ದಾಖಲೆಗಳೊಂದಿಗೆ ದಕ್ಷಿಣ ಕನ್ನಡ ವಕ್ಫ್ ಜಿಲ್ಲಾ ಕಚೇರಿಗೆ ಅತಿ ಶೀಘ್ರವಾಗಿ ಸಲ್ಲಿಸುವಂತೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ಕರ್ನಾಟಕ ರಾಜ್ಯ ಉಚ್ಛ ನ್ಯಾಯಾಲಯವು 2024 ಏಪ್ರಿಲ್ 23 ರಂದು ಈ ಆದೇಶವನ್ನು ನೀಡಿದ್ದು ರಾಜ್ಯ ವಕ್ಫ್ ಮಂಡಳಿಯ ಮಾದರಿ ನಿಯಮಾವಳಿಗೆ ಸಂಬಂಧಪಟ್ಟ ದಾಖಲೆಗಳಾದ ವಕ್ಫ್ ನೊಂದಾಯಿತ ಗೊಂಡಿರುವ ಎಲ್ಲಾ ಮಸೀದಿಗಳ, ಸಂಸ್ಥೆಗಳ ಪಹಣಿ ಪತ್ರ, ವಖ್ಫ್ ನೊಂದಣಿಯಾದ ಪತ್ರ, ಸರಕಾರದಿಂದ ಪಡೆದಿರುವಂತಹ ಮಸೀದಿಗಳ ದಾಖಲೆ ಪತ್ರ,ನೈನ್ ಎಲೆವೆನ್, ಮಹಾಸಭೆಯ ಅಥವಾ ಸಾಮಾನ್ಯ ಸಭೆಯ ನಡವಳಿ,ಕವಚ ಪತ್ರ, ಇತ್ಯಾದಿ ದಾಖಲೆಗಳೊಂದಿಗೆ ಏಳು ದಿನಗಳ ಒಳಗೆ ಸಂಪರ್ಕಿಸುವಂತೆ ಪ್ರಕಟಣೆಯಲ್ಲಿ ದ. ಕ.ಜಿಲ್ಲಾ ವಖ್ಫ್ ಅಧಿಕಾರಿ ಅಬೂಬಕ್ಕರ್ ರವರು ತಿಳಿಸಿದ್ದಾರೆ. ನಮೂನೆ ಸಂಖ್ಯೆ 42 ರ ಅರ್ಜಿ ಫಾರಂ ಇಲ್ಲದಿದ್ದಲ್ಲಿ ಜಿಲ್ಲಾ ಕಚೇರಿಯಲ್ಲಿ ಲಭ್ಯವಿದೆ ಎಂದು ಅವರು ತಿಳಿಸಿದ್ದಾರೆ.