ಕ್ರೀಡೆರಾಷ್ಟ್ರೀಯ

ಐಪಿಎಲ್ 2024: ಡೆಲ್ಲಿ ತಂಡದ ಆಟಗಾರನ ಪಾಲಾದ ಟಾಟಾ ಪಂಚ್ ಇವಿ ಕಾರು

ಐಪಿಎಲ್ ಸೀಸನ್ 17 ಕ್ಕೆ ತೆರೆ ಬಿದ್ದಿದ್ದು ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ ಫೈನಲ್ ಪಂದ್ಯದಲ್ಲಿ ಸನ್ರೈಸರ್ಸ್ ಹೈದರಾಬಾದ್ ತಂಡವನ್ನು ಸೋಲಿಸಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡ ಚಾಂಪಿಯನ್ ಆಗಿ ಮೂಡಿ ಬಂದಿದೆ.

ಸ್ಪೋಟಕ ಬ್ಯಾಟಿಂಗ್ ಪ್ರದರ್ಶಿಸಿದ ಆಟಗಾರನಿಗೆ ನೀಡಲಾಗುವ ಟಾಟಾ ಕಾರ್ ಈ ಬಾರಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಯುವ ಬಾಟ್ಸ್ ಮೆನ್ ಪಾಲಾಗಿದೆ.

ಸೂಪರ್ ಸ್ಟ್ರೈಕರ್ಗೆ ಘೋಷಿಸಲಾಗಿದ್ದ ಟಾಟಾ ಪಂಚ್ ಇವಿ ಕಾರ್ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಆರಂಭಿಕ ಆಸ್ಟ್ರೇಲಿಯಾದ ಯುವ ಬ್ಯಾಟರ್ ಜೇಕ್ ಫ್ರೇಸರ್ ಮೆಕ್ಗುರ್ಕ್ ಪಾಲಾಗಿದೆ.

ಡೆಲ್ಲಿ ಕ್ಯಾಪಿಟಲ್ಸ್ ಪರ 9 ಇನಿಂಗ್ ಗಳಲ್ಲಿ ಆರಂಭಿಕನಾಗಿ ಇಳಿದ ಜೇಕ್ ಫ್ರೇಸರ್ 141 ಎಸೆತಗಳನ್ನು ಎದುರಿಸಿ 234.04 ರ ಸ್ಟ್ರೈಕ್ ರೇಟ್ನಲ್ಲಿ 330 ರನ್ ಬಾರಿಸಿದ್ದರು.    ಆ ಮೂಲಕ ಟಾಟಾ ಪಂಚ್ ಇವಿ ಕಾರ್ ಅನ್ನು ಡೆಲ್ಲಿ ಕ್ಯಾಪಿಟಲ್ಸ್ ತಂಡದ ಆರಂಭಿಕ ಆಟಗಾರ ತಮ್ಮದಾಗಿಸಿಕೊಂಡಿದ್ದಾರೆ.

ಈ ಬಾರಿಯ ಐಪಿಎಲ್ ಹರಾಜಿನಲ್ಲಿ ಜೇಕ್ ಫ್ರೇಸರ್ ಅವರನ್ನು ಯಾವುದೇ ಫ್ರಾಂಚೈಸಿ ಆಯ್ಕೆ ಮಾಡಿರಲಿಲ್ಲ.  ಲುಂಗಿ ಎನ್ಗಿಡಿ ಗಾಯಗೊಂಡಿದ್ದ ಕಾರಣ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಜೇಕ್ ಫ್ರೇಸರ್ ಅವರನ್ನು ಬದಲಿ ಆಟಗಾರನಾಗಿ ಆಯ್ಕೆ ಮಾಡಿತ್ತು.

Leave a Reply

Your email address will not be published. Required fields are marked *

error: Content is protected !!