ವಗ್ಗ: ಪಿಕಪ್ ಹಾಗೂ ಬೈಕ್ ಗಳ ನಡುವೆ ಅಪಘಾತ- ಸವಾರರಿಬ್ಬರಿಗೆ ಗಾಯ
ಪಿಕಪ್ ವಾಹನಕ್ಕೆ ಎದುರಿನಿಂದ ಹಾಗೂ ಹಿಂದಿನಿಂದ ಎರಡು ಬೈಕುಗಳು ಡಿಕ್ಕಿ ಹೊಡೆದು ಇಬ್ಬರು ಸವಾರರು ಗಾಯಗೊಂಡ ಘಟನೆ ಸಿ ರೋಡು-ಕಡೂರು ರಾಷ್ಟ್ರೀಯ ಹೆದ್ದಾರಿಯ ಕಾವಳಪಡೂರು ಗ್ರಾಮದ ವಗ್ಗ ಎಂಬಲ್ಲಿ ಶನಿವಾರ ಸಂಭವಿಸಿದೆ.
ಗಾಯಗೊಂಡ ಬೈಕ್ ಸವಾರರನ್ನು ಗುಣವಂತ ಹಾಗೂ ಶಮೀರ್ ಎಂದು ತಿಳಿದು ಬಂದಿದೆ. ಬೆಳ್ತಂಗಡಿ ತಾಲೂಕಿನ ಲಾಯಿಲ ಗ್ರಾಮದ ಪುದ್ದೊಟ್ಟು ನಿವಾಸಿ ಅನಿಲ್ ಕುಮಾರ್ ಪಿ (32) ಎಂಬವರು ತನ್ನ ಪಿಕಪ್ ವಾಹನದಲ್ಲಿ ಮಂಗಳೂರಿನಿಂದ ಬೆಳ್ತಂಗಡಿ ಕಡೆಗೆ ಬಿ ಸಿ ರೋಡು-ಕಡೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದ ವೇಳೆ ಬಿ ಸಿ ರೋಡು ಕಡೆಯಿಂದ ಗುಣವಂತ ಅವರು ಚಲಾಯಿಸಿಕೊಂಡು ಬಂದ ಬೈಕ್ ಪಿಕಪ್ ವಾಹನಕ್ಕೆ ಎದುರಿನಿಂದ ಡಿಕ್ಕಿ ಹೊಡೆದಿದೆ. ಇದೇ ವೇಳೆ ಪಿಕಪ್ ವಾಹನದ ಹಿಂದಿನಿಂದ ಬರುತ್ತಿದ್ದ ಶಮೀರ್ ಎಂಬವರು ಚಲಾಯಿಸುತ್ತಿದ್ದ ಬೈಕ್ ಪಿಕಪ್ ವಾಹನದ ಹಿಂಭಾಗಕ್ಕೆ ಡಿಕ್ಕಿ ಹೊಡೆದಿದೆ.