ಕೆಂಪು ಲಿಪ್‌ಸ್ಟಿಕ್ ಬ್ಯಾನ್: ಉಲ್ಲಂಘಿಸಿದರೆ ಶಿಕ್ಷೆ..!
ಕೆಂಪು ಬಣ್ಣದ ಲಿಪ್‌ಸ್ಟಿಕ್ ಹಾಕುವುದನ್ನು ನಿಷೇಧ ಮಾಡಲಾಗಿದೆ. ಅರೆ ಇದೇನು ಹೊಸ ರೂಲ್ಸ್ ಅಂದುಕೊಂಡಿರಾ..? ಇದು ಉತ್ತರ ಕೊರಿಯಾ ದೇಶದಲ್ಲಿ. ಹೌದು ಅಲ್ಲಿ ಇನ್ನು ಮುಂದೆ ನಿಮ್ಮಿಷ್ಟದ ಬಣ್ಣದ ಲಿಪ್‌ಸ್ಟಿಕ್ ಹಾಕುವಂತಿಲ್ಲ. ಕೆಂಪು ಬಣ್ಣದ ಲಿಪ್‌ಸ್ಟಿಕ್ ದೇಶದಿಂದಲೇ ಬ್ಯಾನ್ ಮಾಡಲಾಗಿದೆ.

ಉತ್ತರ ಕೊರಿಯಾದಲ್ಲಿನ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಆಡಳಿತದಲ್ಲಿ ನಿಯಮ, ಷರತ್ತುಗಳು ಅತ್ಯಂತ ಕಠಿಣ. ಅಲ್ಲಿ ಇಷ್ಟದಂತೆ ಜೀವಿಸಲು ಕಷ್ಟ. ಅನೇಕ ಕಠಿಣ ನಿಯಮಗಳ ಮಧ್ಯೆ ಇದೀಗ ಫ್ಯಾಶನ್, ಮೇಕ್ಅಪ್ ಗೂ ಹೊಸ ರೂಲ್ಸ್. ಈ ಪೈಕಿ ಕೆಂಪು ಲಿಪ್‌ಸ್ಟಿಕ್ ಬ್ಯಾನ್ ಆಗಿದೆ.
ಕೆಂಪು ಬಣ್ಣ ವಿಮೋಚನೆ ಸಂಕೇತ, ಬಂಡವಾಳಶಾಹಿಯ ಸಂಕೇತ. ಕೆಂಪು ಬಣ್ಣದ ಲಿಪ್‌ಸ್ಟಿಕ್ ಹೆಣ್ಣಿನ ಮಾದಕತೆ ಹೆಚ್ಚಿಸಲಿದೆ, ಹೆಣ್ಣಿನ ಸೌಂದರ್ಯವನ್ನೂ ವದ್ಧಿಸಲಿದೆ. ಇದರಿಂದ ದೇಶ ನೈತಿಕ ಅಧಪತನಕ್ಕೆ ಗುರಿಯಾಗುವ ಸಾಧ್ಯತೆ ಇದೆ. ಹೀಗಾಗಿ ಕೆಂಪು ಬಣ್ಣದ ಲಿಪ್‌ಸ್ಟಿಕ್ ಬ್ಯಾನ್ ಮಾಡಲಾಗಿದೆ. ಯಾರೂ ಕೂಡ ಉತ್ತರ ಕೊರಿಯಾದಲ್ಲಿ ಕೆಂಪು ಬಣ್ಣದ ಲಿಪ್‌ಸ್ಟಿಕ್ ಹಾಕುವಂತಿಲ್ಲ. ಅಪ್ಪಿ ತಪ್ಪಿ ಹಾಕಿದರೆ ಶಿಕ್ಷೆ ತಪ್ಪಿದ್ದಲ್ಲ. ಇವೆಲ್ಲಾ ಕಿಮ್ ಜಾಂಗ್ ಉನ್ ನಿಯಮ. ಐಲೈನರ್, ಐಶ್ಯಾಡೋ ಸೇರಿದಂತೆ ಎಲ್ಲಾ ಮೇಕ್ಅಪ್ ಸಿಂಪಲ್ ಹಾಗೂ ಲೈಟ್ ಕಲರ್ ಆಗಿರಬೇಕು. ಉದ್ದ ಕೂದಲು ಬಿಡಲು, ಶಾರ್ಟ್ ಕೂದಲು ಹೇರ್‌ಸ್ಟೈಲ್ ಮಾಡಲು ಅವಕಾಶವಿದೆ. ಆದರೆ ಕೂದಲು ಹಾರಾಡಿಸ್ಕೊಂಡು ಹೋಗವಂತಿಲ್ಲ. ಕೂದಲಿಗೆ ಬಣ್ಣ ಹಾಕುವಂತಿಲ್ಲ. ಕೂದಲು ನಿಯಮ ಉಲ್ಲಂಘಿಸಿದರೂ ಶಿಕ್ಷೆ ಕಟ್ಟಿಟ್ಟ ಬುತ್ತಿ ಎನ್ನಲಾಗುತ್ತಿದೆ. ಅಲ್ಲಿನ ಜನರಿಗೆ ಈ ಕಠಿಣ ನಿಯಮಗಳು ಇಷ್ಟವಿಲ್ಲದಿದ್ದರೂ ಅನಿವಾರ್ಯವಾಗಿ ಒಪ್ಪಿಕೊಳ್ಳಬೇಕಾಗಿದೆ.