ಎಸ್ಸೆಸ್ಸೆಲ್ಸಿ: 603 ಅಂಕ ಪಡೆದು ಶಾಲೆಗೆ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿನಿಯ ಮನೆಗೆ ತೆರಳಿ ಉಡುಗೊರೆ ನೀಡಿ ಸನ್ಮಾನಿಸಿದ ಪಾಪೆಮಜಲು ಶಾಲಾ ಕಾರ್ಯಾಧ್ಯಕ್ಷ
ಪುತ್ತೂರು: 2023-24ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಪಾಪೆಮಜಲು ಸರಕಾರಿ ಪ್ರೌಢಶಾಲೆ ನೂರು ಶೇ. ಫಲಿತಾಂಶ ಪಡೆದುಕೊಂಡಿದ್ದು ಪರೀಕ್ಷೆ ಬರೆದ ಎಲ್ಲಾ 42 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.

ಭವ್ಯಶ್ರೀ ಅವರು 603 ಅಂಕಗಳನ್ನು ಪಡೆದು ಶಾಲೆಗೆ ಪ್ರಥಮ ಸ್ಥಾನಿಯಾಗಿದ್ದು, ಇವರನ್ನು ಶಾಲಾ ಎಸ್ ಡಿ ಎಂ ಸಿ ಕಾರ್ಯಾಧ್ಯಕ್ಷ ಇಕ್ಬಾಲ್ ಹುಸೇನ್ ಮತ್ತು ಶಿಕ್ಷಣ ತಜ್ಞ ದಶರಥ್ ರೈ ಅವರು ವಿದ್ಯಾರ್ಥಿನಿಯ ಮನೆಗೆ ತೆರಳಿ ಶಾಲು ಹೊದಿಸಿ ಉಡುಗೊರೆ ನೀಡಿ ಗೌರವಿಸಿದರು. ಪೋಷಕರು ಮತ್ತು ಶಾಲಾ ಎಸ್ ಡಿ ಎಂ ಸಿ ಸದಸ್ಯ ಹೊನ್ನಪ್ಪ ನಾಯ್ಕ್ ಉಪಸ್ಥಿತರಿದ್ದರು. ಭವ್ಯಶ್ರೀ ಉತ್ತಮ ವಾಗ್ಮಿ, ವಾಲಿಬಾಲ್ ಕ್ರೀಡಾಪಟು ಮತ್ತು ಗೈಡ್ಸ್ ರಾಜ್ಯ ಪುರಸ್ಕಾರ ಪಡೆದ ಪ್ರತಿಭಾನ್ವಿತ ವಿದ್ಯಾರ್ಥಿಯಾಗಿದ್ದಾಳೆ.





