ಪುತ್ತೂರು-ವಿಟ್ಲ ಸರಕಾರಿ ಬಸ್ ವ್ಯತ್ಯಯ: ವಕೀಲರಿಂದ ಶಾಸಕರಿಗೆ ಮನವಿ
ಪುತ್ತೂರು: ಪುತ್ತೂರಿನಿಂದ ವಿಟ್ಲಕ್ಕೆ ಸಂಚರಿಸುತ್ತಿದ್ದ ಕೆಎಸ್ಆರ್ ಟಿಸಿ ಬಸ್ ಕಳೆದ ನಾಲ್ಕು ತಿಂಗಳಿಂದ ಸಂಚಾರವನ್ನು ರದ್ದು ಮಾಡಲಾಗಿದ್ದು ಬಸ್ ವ್ಯವಸ್ಥೆ ಪುನರಾರಂಭ ಮಾಡಬೇಕಂದು ಶಾಸಕರಿಗೆ ವಿಟ್ಲ ಭಾಗದ ವಕೀಲರು ಮನವಿ ಮಾಡಿದ್ದಾರೆ.
ಸಂಜೆ 7 ಮತ್ತು ಬೆಳಿಗ್ಗೆ ಬಿಸಿರೋಡಿಂದ ವಿಟ್ಲ ಮಾರ್ಗವಾಗಿ ಪುತ್ತೂರಿಗೆ ಬರುತ್ತಿದ್ದ ಬಸ್ಸು ಕಳೆದ ನಾಲ್ಕು ತಿಂಗಳಿಂದ ಸಂಚಾರ ನಿಲ್ಲಿಸಲಾಗಿದೆ ಎಂದು ಶಾಸಕರಿಗೆ ತಿಳಿಸಿದರು. ಈ ಬಗ್ಗೆ ಕೆಎಸ್ ಆರ್ ಟಿಸಿ ಅಧಿಕಾರಿಗಳ ಬಳಿ ಮಾಹಿತಿ ಪಡೆದ ಶಾಸಕರು ಎರಡು ದಿನದೊಳಗೆ ವ್ಯವಸ್ಥೆ ಸರಿಪಡಿಸುವಂತೆ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ವಕೀಲರಾದ ಅಶೋಕ್ ಸಿ ಎಚ್, ಸುಪ್ರಿತಾ, ಚಂದ್ರಹಾಸ, ಸಂತೋಷ್ ಕೆ ಆರ್ ಉಪಸ್ಥಿತರಿದ್ದರು.