ಕರಾವಳಿಕ್ರೈಂ

ಪುತ್ತೂರು: KSRTC ಬಸ್- ಆಟೋ ರಿಕ್ಷಾ ಮಧ್ಯೆ ಭೀಕರ ಅಪಘಾತ; ರಿಕ್ಷಾ ಚಾಲಕ ಮೃತ್ಯು



ಪುತ್ತೂರು: ಕೆಎಸ್ಸಾರ್ಟಿಸಿ ಬಸ್ ಮತ್ತು ಆಟೋ ರಿಕ್ಷಾ ನಡುವೆ ಢಿಕ್ಕಿ ಸಂಭವಿಸಿ ರಿಕ್ಷಾ ಚಾಲಕ ಮೃತಪಟ್ಟ ಘಟನೆ ಏ.27ರಂದು ಮುಕ್ರಂಪಾಡಿ ಬಳಿ ನಡೆದಿದೆ.

ಮೃತ ಆಟೋ ಚಾಲಕನನ್ನು ಜೈಸನ್ (30. ವ)ಎಂದು ಗುರುತಿಸಲಾಗಿದೆ. ಪುತ್ತೂರಿಗೆ ಬರುತ್ತಿದ್ದ ಬಸ್ ಮತ್ತು ವಿರುದ್ಧ ದಿಕ್ಕಿನಿಂದ ಚಲಿಸುತ್ತಿದ್ದ ರಿಕ್ಷಾ ನಡುವೆ ನಸುಕಿನ ಜಾವ ಢಿಕ್ಕಿ ಸಂಭವಿಸಿದೆ

ಅಪಘಾತದ ತೀವ್ರತೆಗೆ ಚಾಲಕ ಜೈಸನ್ ರಿಕ್ಷಾದ ಒಳಗೆ ಸಿಲುಕಿ ಹಾಕಿಕೊಂಡಿದ್ದರು. ರಿಕ್ಷಾ ಸಂಪೂರ್ಣ ನಜ್ಜುಗುಜ್ಜಾಗಿದೆ. ಪುತ್ತೂರು ಅಗ್ನಿಶಾಮಕ ದಳದವರು ಸ್ಥಳಕ್ಕೆ ಆಗಮಿಸಿ ಜೈಸನ್ ಅವರನ್ನು ಹೊರತೆಗೆದಿದ್ದಾರೆ. ಈ ವೇಳೆ ಜೈಸನ್ ಮೃತಪಟ್ಟಿದ್ದರು ಎಂದು ತಿಳಿದು ಬಂದಿದೆ.

Leave a Reply

Your email address will not be published. Required fields are marked *

error: Content is protected !!