ರಾಜಕೀಯರಾಷ್ಟ್ರೀಯ

ಅಸದುದ್ದೀನ್‌ ಉವೈಸಿ ವಿರುದ್ಧ ಕಾಂಗ್ರೆಸ್‌’ನಿಂದ ಟೆನ್ನಿಸ್‌ ತಾರೆ ಸಾನಿಯಾ ಮಿರ್ಝಾ ಕಣಕ್ಕೆ..?



ಎಐಎಂಐಎಂ ಮುಖ್ಯಸ್ಥ ಅಸದುದ್ದೀನ್‌ ಉವೈಸಿ ಅವರ ವಿರುದ್ಧ ಟೆನ್ನಿಸ್‌ ತಾರೆ ಸಾನಿಯಾ ಮಿರ್ಝಾ ಅವರನ್ನು ಕಣಕ್ಕಿಳಿಸಲು ಕಾಂಗ್ರೆಸ್‌ ಚಿಂತನೆ ನಡೆಸಿದೆ ಎನ್ನಲಾಗುತ್ತಿದೆ.

ಸಾನಿಯಾ ಮಿರ್ಜಾ ಅವರ ಜನಪ್ರಿಯತೆ ಹೊಂದಿದ ಟೆನ್ನಿಸ್ ತಾರೆಯಾಗಿದ್ದು ಅವರ ಜನಪ್ರಿಯತೆ ಆಧಾರದಲ್ಲಿ ಹೈದರಾಬಾದ್‌ ಕ್ಷೇತ್ರವನ್ನು ತನ್ನ ಕೈ ವಶ ಮಾಡಲು ಕಾಂಗ್ರೆಸ್‌ ಚಿಂತನೆ ನಡೆಸಿದೆ ಎನ್ನಲಾಗಿದೆ.

ಭಾರತ ಕ್ರಿಕೆಟ್‌ ತಂಡದ ಮಾಜಿ ನಾಯಕ ಹಾಗೂ ಕಾಂಗ್ರೆಸ್ ಮುಖಂಡ ಮುಹಮ್ಮದ್‌ ಅಝರುದ್ದೀನ್‌ ಅವರು ಸಾನಿಯಾ ಮಿರ್ಜಾ ಹೆಸರನ್ನು ಕಾಂಗ್ರೆಸ್ ಸಭೆಯಲ್ಲಿ ಪ್ರಸ್ತಾಪಿಸಿದ್ದರೆನ್ನಲಾಗಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇನ್ನಷ್ಟೇ ಸಿಗಬೇಕಾಗಿದೆ.

Leave a Reply

Your email address will not be published. Required fields are marked *

error: Content is protected !!